NAGARAJA 
ಜಿಲ್ಲೆ

ಎಟಿಎಂ ಕಳ್ಳತನಕ್ಕೆ ಯತ್ನ ಆರೋಪಿ ಬಂಧನ

Raichur - Reporter - Rachhai Swamy

ಸಿಂಧನೂರು(ರಾಯಚೂರು) ಎಟಿಎಂ ಹಣ ದೋಚಲು ಯತ್ನಿಸಿದ ಆರೋಪಿಯನ್ನು ಪೊಲೀಸರು ಬಂಧನ ಮಾಡಿದ ಘಟನೆ ಶನಿವಾರ ನಡೆದಿದೆ.

ಆರೋಪಿ ನಾಗರಾಜ(23).

ನಗರದಲ್ಲಿರುವ ಎಸ್‌ಬಿಐ ಎಟಿಎಂನ ಹತ್ತಿರದಲ್ಲಿ ಯಾರು ಇಲ್ಲದ ಸಮಯ ನೋಡಿ ದರೊಡೆಗೆ ಯತ್ನ ಮಾಡಿದ್ದು, ಮಷಿನ್ ಮುರಿಯುತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕೂಡಲೇ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ಬಂಧನ ಮಾಡಿದ್ದಾರೆ.

ಈ ಕುರಿತು ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.