ಗುಂಡ್ಲುಪೇಟೆ: ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ನಿವೇಶನದ ವಿಚಾರದಲ್ಲಿ ಜಗಳವಾಡಿಕೊಂಡು ಮಚ್ಚಿನಿಂದ ಹಲ್ಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗ್ರಾಮದ ಮಲ್ಲು ಬಂಧಿತ ಆರೋಪಿ. ಮಲ್ಲು ಹಾಗೂ ಸಿದ್ದರಾಜು ಅವರ ನಡುವೆ ನಿವೇಶನದ ವಿಚಾರದಲ್ಲಿ ತಕರಾರು ನಡೆದಿತ್ತು. ಮಾತಿಗೆ ಮಾತು ಬೆಳೆದು ಮಲ್ಲು, ಆ 4ರಂದು ಸಿದ್ದರಾಜು ತಲೆಗೆ ಮಚ್ಚಿನಿಂದ ಹೊಡೆದು ಗಾಯಗೊಳಿಸಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪಟ್ಟಣದ ಪೊಲೀಸರು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಶನಿವಾರ ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.