ಬದಿಯಡ್ಕ: ಕುಂಬ್ಡಾಜೆ ಗ್ರಾಪಂ ಆಶ್ರಯದಲ್ಲಿ ಎನ್.ಕ್ಯು.ಎ.ಎಸ್.ಅನುಮೋದಿತ ಕುಂಬ್ಡಾಜೆ ಕುಟುಂಬ ಆರೋಗ್ಯ ಕೇಂದ್ರವನ್ನು ರಾಷ್ಟ್ರೀಯ ಮಾನ್ಯತೆ ಲಭಿಸಿದಕ್ಕೆ ಅಭಿನಂದಿಲಾಯಿತು. ಅಗಲ್ಪಾಡಿ ಶಾಲಾ ಮೈದಾನದಿಂದ ಗ್ರಾಪಂ ಕಚೇರಿವರೆಗೆ ಅಭಿನಂದನಾ ಮೆರವಣಿಗೆ ನಡೆಯಿತು.
ಶಾಸಕ ಎನ್.ಎ.ನೆಲ್ಲಿಕುನ್ನು, ಗ್ರಾಪಂ ಅಧ್ಯಕ್ಷ ಹಮೀದ್ ಪೊಸೋಳಿಗೆ, ಜನಪ್ರತಿನಿಧಿಗಳು, ಜಿಪಂ ಸದಸ್ಯರು, ಬ್ಲಾಕ್ ಪಂಚಾಯಿತಿ ಸದಸ್ಯರು, ಕುಟುಂಬಶ್ರೀ ಸದಸ್ಯರು, ಐಸಿಡಿಎಸ್ ಸದಸ್ಯರು, ಹಸಿರು ಕ್ರಿಯಾಸೇನೆ ಸದಸ್ಯರು, ಆಶಾ ಕಾರ್ಯಕರ್ತೆಯರು, ಆಸ್ಪತ್ರೆ ಸಿಬ್ಬಂದಿ, ವಿವಿಧ ಇಲಾಖೆ ಅಧಿಕಾರಿಗಳು, ರಾಜಕೀಯ ಪಕ್ಷದ ಪ್ರತಿನಿಧಿಗಳು, ಸಿಡಿಎಸ್ ಅಧ್ಯಕ್ಷರು, ಎಡಿಎಸ್ ಸದಸ್ಯರು, ವ್ಯಾಪಾರಿ ಪ್ರಮುಖರು, ಶಿಕ್ಷಕರು, ಸ್ಥಳೀಯರು ಪಾಲ್ಗೊಂಡಿದ್ದರು.
ಅಭಿನಂದನಾ ಸಮಾರಂಭ ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸಿ ವೈದ್ಯಾಧಿಕಾರಿ ಡಾ.ಸೈಯದ್ ಶುಹೈಬ್ ಅವರನ್ನು ಸನ್ಮಾನಿಸಿದರು. ಗ್ರಾಪಂ ಅಧ್ಯಕ್ಷ ಹಮೀದ್ ಪೊಸೊಳಿಗೆ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷೆ ಎಲಿಸಬೆತ್ ಕ್ರಾಸ್ತಾ, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ರಜಾಕ್, ಕ್ಷೇಮಾಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಖದೀಜಾ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸಂಜೀವ ಶೆಟ್ಟಿ, ಜಿಪಂ ಸದಸ್ಯೆ ಶೈಲಜಾ ಭಟ್, ಬ್ಲಾಕ್ ಪಂಚಾಯಿತಿ ಸದಸ್ಯೆ ನಳಿನಿ, ಯಶೋದಾ, ವಾರ್ಡ್ ಸದಸ್ಯ ಹರೀಶ್ ಗೋಸಾಡ, ವೈದ್ಯಾಧಿಕಾರಿ ಡಾ.ಸೈಯದ್ ಶುಹೈಬ್ ತಂಙಳ್, ರಾಜಕೀಯ ಪಕ್ಷದ ಪ್ರತಿನಿಧಿ ಬಿ.ಟಿ.ಅಬ್ದುಲ್ಲ ಕುಞಿ, ಮುಖಂಡರಾದ ನಾರಾಯಣನ್ ನಂಬಿಯಾರ್ ಮಾತನಾಡಿದರು. ಜೆಎಚ್‌ಐ ರಾಜೇಶ್ ಕೆ.ನಂಬಿಯಾರ್ ಸ್ವಾಗತಿಸಿ, ಪಂಚಾಯಿತಿ ತಾಂತ್ರಿಕ ಸಹಾಯಕ ನವಾಜ್ ವಂದಿಸಿದರು.