ಜಿಲ್ಲೆ

ಖಾತೆಯಲ್ಲಿದ್ದ ಹಣ ದೋಚಿದ ಮಹಿಳೆ

Belagavi

ಬೆಳಗಾವಿ: ಸದಾಶಿವ ನಗರದ ತರಕಾರಿ ವ್ಯಾಪಾರಿಯೊಬ್ಬರ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಿ 8,750 ರೂ. ಲಪಟಾಯಿಸಿದ ಘಟನೆ ಸೋಮವಾರ ಸಂಜೆ ನಡೆದಿದೆ.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಆನ್‌ಲೈನ್‌ನಲ್ಲಿ ವ್ಯಾಪಾರ ವಹಿವಾಟು ನಡೆದಿದೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡ ಮಹಿಳೆ ತಾನು ಮಿಲಿಟರಿಯಲ್ಲಿದ್ದೇನೆ ಎಂದು ಹೇಳಿ ತರಕಾರಿ ವ್ಯಾಪಾರಸ್ಥ ದೀಪಕ ಲೆಂಡೆ ಎನ್ನುವವರ ವಿಶ್ವಾಸ ಗಳಿಸಿದ್ದಾಳೆ.

ತರಕಾರಿ ತೆಗೆದುಕೊಂಡು ಹಣ ಜಮಾ ಮಾಡುವ ಬದಲು ಆತನ ಖಾತೆ ನಂಬರ್ ಹಾಗೂ ಒಟಿಪಿ ಪಡೆದು ಖಾತೆಯಿಂದ ಹಣ ದೋಚಿದ್ದಾಳೆ. ಬ್ಯಾಂಕ್ ಖಾತೆಯಿಂದ ಹಣ ತೆಗೆದಿರುವುದು ಗಮನಕ್ಕೆ ಬಂದ ಬಳಿಕ ವ್ಯಾಪಾರಸ್ಥ ಗಲಿಬಿಲಿಗೊಂಡು ಸೈಬರ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾನೆ.