ನರೇಗಲ್ಲ: ಪಟ್ಟಣದ ಇತ್ತೀಚೆಗೆ ಆಯೋಜಿಸಿದ್ದ ಗಜೇಂದ್ರಗಡ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಅಭಿನವ ಅನ್ನದಾನ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಸಮಗ್ರ ವೀರಾಗ್ರಣಿಗೆ ಪಾತ್ರರಾಗಿದ್ದಾರೆ.
ಗುಂಪು ಕ್ರೀಡೆಗಳಾದ ಕಬಡ್ಡಿ, ವಾಲಿಬಾಲ್, ಖೋ ಖೋ, ಥ್ರೋಬಾಲ್, ಬಾಲ್ ಬ್ಯಾಡ್ಮಿಂಟನ್, ಚೆಸ್, ಟಿನ್ನಿಸ್ ವಾಲಿಬಾಲ್, ಟೇಬಲ್‌ಟೆನ್ನಿಸ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ.
ವೈಯಕ್ತಿಕ(ಬಾಲಕರ) ಕ್ರೀಡೆಗಳಾದ 100 ಮೀ. ಓಟದಲ್ಲಿ ಹರೀಶ ಬಿ.ಎಚ್ ದ್ವಿತೀಯ, 400 ಮೀ. ಓಟದಲ್ಲಿ ಪ್ರಸನ್ನ ಖಾನಾಪೂರ ತೃತೀಯ ಸ್ಥಾನ, 1500 ಮೀ ಮಹಾಂತೇಶ ಜೂಲಗುಡ್ಡ ದ್ವಿತೀಯ ಸ್ಥಾನ, 5000 ಮೀ ಓಟದಲ್ಲಿ ದರ್ಶನ ಪಿ ಪ್ರಥಮ ಸ್ಥಾನ, 5 ಕಿ.ಮೀ ನಡುಗೆಯಲ್ಲಿ ಸಂಜೀವಕುಮಾರ ಚವ್ಹಾಣ ಪ್ರಥಮ, ಗಂಗಾಧರ ತೃತೀಯ ಸ್ಥಾನ. 110 ಮೀ. ಹರ್ಡಲ್ಸ್ ಸೂರಜ್ ಕುರಿ ದ್ವಿತೀಯ ಸ್ಥಾನ, ನಕುಲ್ ತೃತೀಯ ಸ್ಥಾನ, ಗುಡ್ಡಗಾಡು ಓಟದಲ್ಲಿ ಸಂಗಮೇಶ ಗೋಜನೂರ ತೃತೀಯ, ದರ್ಶನ ಪಿ 4ನೇ ಸ್ಥಾನ, ಅರುಣಗೌಡ್ರ 6ನೇ ಸ್ಥಾನ, 4*100 ಮೀ ರಿಲೇ ದರ್ಶನ ಪಿ ಪ್ರಥಮ, ಅರುಣಗೌಡ್ರ ದ್ವಿತೀಯ ಸ್ಥಾನ, ಎತ್ತರ ಜಿಗಿತ ಪ್ರಥಮ ಸ್ಥಾನ, ಉದ್ದ ಜಿಗಿತ ಸಾಗರ ಬಿ ತೃತೀಯ ಸ್ಥಾನ, ತ್ರೀವಿಧಜಿಗಿತ ಪ್ರದೀಪ ಹಿರೇಗೌಡ್ರ ದ್ವಿತೀಯ ಸ್ಥಾನ, ಚಂದ್ರುನಾಯಕ ಎಲಿಗಾರ ತೃತೀಯ ಸ್ಥಾನ, ಚಕ್ರಎಸೆತ ಸಂಗಮೇಶ ಗೋಜನೂರ ಪ್ರಥಮ ಸ್ಥಾನ, ಬಸವರಾಜ ಸಂಗನಾಳ ತೃತೀಯ ಸ್ಥಾನ, ಸರಪಳಿ ಗುಂಡುಎಸೆತ ಸಂಗಮೇಶ ಗೋಜನೂರ ಪ್ರಥಮ ಸ್ಥಾನ, ಸಚಿನ ಹೊಂಬಳ ತೃತೀಯ ಸ್ಥಾನ ಪಡೆದಿದ್ದಾರೆ.
100 ಮೀ ಓಟದಲ್ಲಿ ಲಕ್ಷ್ಮೀ ಅಣಗೌಡ್ರ ತೃತೀಯ ಸ್ಥಾನ , 200,400,800 ಮೀ ಓಟದಲ್ಲಿ ಕಾವ್ಯಾ ಅಬ್ಬಿಗೇರಿ ಪ್ರಥಮ ಸ್ಥಾನ, 400 ಮೀ ಓಟದಲ್ಲಿ ತೇಜಸ್ವಿನಿ ಕೇಂಚನಗೌಡ್ರ ತೃತೀಯ ಸ್ಥಾನ, 800 ಮೀ ಓಟದಲ್ಲಿ ಕಾವ್ಯಾ ಜತ್ತಿ ದಿತೀಯ ಸ್ಥಾನ, 1500 ಮೀ.ಓಟದಲ್ಲಿ ಬೀಮವ್ವ ಪ್ರಥಮ, ಯಶೋಧಾ ದ್ವಿತೀಯ ಸ್ಥಾನ, 3000 ಮೀ ಓಟದಲ್ಲಿ ಭಿಮವ್ವ ಪ್ರಥಮ ಸ್ಥಾನ, 5000 ಮೀ ಓಟದಲ್ಲಿ ಸಂಜನಾ ಹಡಪದ ಪ್ರಥಮ ಸ್ಥಾನ, ಸಮಜನಾ ಕಾಟವಾ ದ್ವಿತೀಯ ಸ್ಥಾನ, 3 ಕಿ.ಮೀ ನಡುಗೆ ಸೃಷ್ಠಿ ನಿಡಗುಂದಿ ಪ್ರಥಮ ಸ್ಥಾನ, 4100 ರಿಲೇ, 4400 ರಿಲೇಯಲ್ಲಿ ಕಾವ್ಯಾ ನಿಡಗುಂದಿ, ತೇಜಸ್ವಿನಿ ಕೆಂಚನಗೌಡ್ರ ಪ್ರಥಮ ಸ್ಥಾನ, ಎತ್ತರ ಜಿಗಿತ ಅನುಷಾ ಹನಮಸಾಗರ ಪ್ರಥಮ, ಅಕ್ಷತಾ ಪೂಜಾರ ತೃತೀಯ ಸ್ಥಾನ ಪಡೆಯುವ ಮೂಲಕ ಸಮಗ್ರ ವೀರಾಗ್ರಣಿಗೆ ಪಾತ್ರರಾಗಿ ಜಿಲ್ಲಾ ಮಟ್ದದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಪ್ರಾಚಾರ್ಯ ವೈ.ಸಿ. ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.