ರಾಯಚೂರು ಚಲಿಸುತ್ತಿದ್ದ ಕೆಕೆಆರ್‌ಟಿಸಿ ಬಸ್ ಆಕಸ್ಮಿಕವಾಗಿ ಬೆಂಕಿ ಹತ್ತಿ,ಹೊಗೆ ಆವರಿಸಿಕೊಂಡು ಪ್ರಯಾಣಿಕರು ಆತಂಕಗೊAಡ ಘಟನೆ ತಾಲೂಕಿನ ಕಲಮಲ ಗ್ರಾಮದ ಬಳಿ ಶುಕ್ರವಾರ ಜರುಗಿದೆ.
ಜಿಲ್ಲೆಯಲ್ಲಿ ಈ ಬಾರಿ ಆರಂಭದಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಳವಾಗುತ್ತಿದ್ದು,ಅಗ್ನಿ ಅವಘಡಗಳ ಸಂಖ್ಯೆ ಸಹ ಹೆಚ್ಚಳವಾಗುತ್ತಿವೆ. ರಾಯಚೂರು ನಗರದಿಂದ ಲಿಂಗಸುಗೂರು ಮಾರ್ಗವಾಗಿ ಹೊರಟಿದ್ದ ಕೆಕೆಆರ್‌ಡಿಸಿ ಬಸ್‌ನಲ್ಲಿ ಬಿಸಿಲ ಝಳ ಹೆಚ್ಚಾಗಿ ಟೈಯರ್‌ಗೆ ಬೆಂಕಿ ಹತ್ತಿ ಇಂಜಿನ್ ಹಾಗೂ ಬಸ್‌ನಲ್ಲಿ ದಟ್ಟ ಹೊಗೆ ಹೊಗೆ ಕಾಣಿಸಿಕೊಂಡಿದೆ.
ಹೊಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಂತೆ, ಬಸ್‌ನಲ್ಲಿದ್ದ ಪ್ರಯಾಣಿಕರು ಜೀವ ಉಳಿಸಿಕೊಳ್ಳಲು ತುರ್ತು ದ್ವಾರದ ಮೂಲಕ ಹೊರಗೆ ಜಿಗಿದಿz್ದÁರೆ. ಚಾಲಕನ ದ್ವಾರದಿಂದಲೂ ಹೊರಗೆ ಜಿಗಿದಿz್ದÁರೆ. ಕೆಳಗೆ ಇಳಿಯಲು ಮುಂದಾದ ಪ್ರಯಾಣಿಕರಲ್ಲಿ ನೂಕು ನುಗ್ಗಲು ಏರ್ಪಟ್ಟಿದೆ. ಅದೃಷ್ಟವಶಾತ ಯಾರಿಗೂ ಹೆಚ್ಚಿನ ಗಾಯಗಳಾಗಿಲ್ಲ. ಕೆಕೆಆರ್‌ಟಿಸಿ ಸಿಬ್ಬಂದಿಗಳು ಪ್ರಯಾಣಿಕರನ್ನು ಮತ್ತೊಂದು ಬಸ್ ಮೂಲಕ ಕಳುಹಿಸಿಕೊಟ್ಟಿದ್ದಾರೆ.