ಜಿಲ್ಲೆ

ಆಕಸ್ಮಿಕ ಬೆಂಕಿ ಗುಡಿಸಲು ಭಸ್ಮ

ಜಿ.ಹೆಚ್. ಧನ್ಯಕುಮಾರ್

ಮೂಡಿಗೆರೆ: ಆಕಸ್ಮಿಕವಾಗಿ ಬೆಂಕಿ ತಗುಲಿ ತಾಲೂಕಿನ ಬಾಳೆಗದ್ದೆ ಗ್ರಾಮದ ಹೊಸಪುರದಲ್ಲಿ ಜ್ಯೋತಿ ಮತ್ತು ಚಂದ್ರು ದಂಪತಿಗಳ ಗುಡಿಸಲು ಭಸ್ಮವಾಗಿದೆ. ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ದಂಪತಿಗಳು ತಡಿಕೆಯಿಂದ ಗುಡಿಸಲು ನಿರ್ಮಿಸಿಕೊಂಡಿದ್ದರು. ಕೂಲಿ ಕೆಲಸಕ್ಕೆ ಹೋದಾಗ ಆಕಸ್ಮಿಕವಾಗಿ ಗುಡಿಸಲಿಗೆ ಬೆಂಕಿ ತಗುಲಿ ಪಾತ್ರೆ, ಬಟ್ಟೆ, ಹಾಸಿಗೆ ಸೇರಿದಂತೆ ಎಲ್ಲ ವಸ್ತುಗಳು ಸುಟ್ಟು ಕರಕಲಾಗಿದೆ. ಈ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. ಮಕ್ಕಳ ಪುಸ್ತಕ ಶಾಲೆ ಬ್ಯಾಗ್ ಕೂಡ ಸುಟ್ಟುಹೋಗಿವೆ.

ಗುಡಿಸಲಿನಲ್ಲಿದ್ದ ನಮ್ಮ ಎಲ್ಲ ವಸ್ತುಗಳು ಸುಟ್ಟು ನಮಗೆ ಬದುಕು ಇಲ್ಲದಂತಾಗಿದೆ. ಇಬ್ಬರು ಮಕ್ಕಳನ್ನು ಕರೆದುಕೊಂಡು ಎಲ್ಲಿಗೆ ಹೋಗುವುದು ಎಂದು ಗೊತ್ತಾಗುತ್ತಿಲ್ಲ. ನಮಗೆ ಗ್ರಾಪಂನಿಂದ ನಿವೇಶನ ನೀಡಿ ಮನೆ ನಿರ್ಮಾಣ ಮಾಡಿಕೊಡಬೇಕು ಎಂದು ನಿರಾಶ್ರಿತೆ ಜ್ಯೋತಿ ಆಗ್ರಹಿಸಿದ್ದಾರೆ.