ಹೊಳಲ್ಕೆರೆ(ಚಿತ್ರದುರ್ಗ)
ಪಟ್ಟಣದ ಶಿವಮೊಗ್ಗ ರಸ್ತೆ ವಾಲ್ಮೀಕಿ ಭವನದ ಬಳಿ ಸೋಮವಾರ ಮಧ್ಯಾಹ್ನ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ತಾಲೂಕಿನ ಮಾಳೇನಹಳ್ಳಿಯ ಸತೀಶ್(22),ಮನು(22)ಹಾಗೂ ರಂಗಾಪುರದ ಚಂದ್ರು(22) ಎಂದು ಗುರುತಿಸಲಾಗಿದೆ.
ಎರಡು ಬೈಕ್‌ಗಳಲ್ಲಿ ಹೊಳಲ್ಕೆರೆಯಿಂದ ತಮ್ಮೂರಿಗೆ ತೆರಳುತ್ತಿದ್ದ ವೇಳೆ ಶಿವಮೊಗ್ಗದ ಕಡೆಯಿಂದ ವೇಗವಾಗಿ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಬೈಕ್‌ಗಳಿಗೆ ಡಿಕ್ಕಿ ಹೊಡೆದು ಈ ದುರ್ಘಟನೆ ನಡೆದಿದೆ. ಹೊಳಲ್ಕೆರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಗ್ರಾಮಸ್ಥರ ಆಕ್ರೋಶ
ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಮಾಳೇನಹಳ್ಳಿ ಗ್ರಾಮಸ್ಥರು ಘಟನಾ ಸ್ಥಳದಲ್ಲಿ ನಿರಂತರ ಅಪಘಾತಗಳಾಗುತ್ತಿದ್ದರು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸಿದೆ ಹೊಣೆಗೇಡಿತನ ಪ್ರದರ್ಶಿಸಿದ್ದಾರೆ. ಕೂಡಲೇ ಸ್ಥಳದಲ್ಲಿ ಅಪಘಾತ ವಲಯ ವೆಂದು ಫಲಕಗಳನ್ನು ಹಾಕ ಬೇಕೆಂದು ಆಗ್ರಹಿಸಿದ್ದಾರೆ.