ಮಂಗಳೂರು: ಸುರತ್ಕಲ್ ಜಂಕ್ಷನ್ ನಲ್ಲಿ ಸ್ಕಿಡ್ ಆಗಿ ಬಿದ್ದ ಬೈಕ್ ಸವಾರನ ಮೇಲೆ ಲಾರಿ ಹರಿದು ಯುವಕ ಉಡುಪಿ ಜಿಲ್ಲೆಯ ಕಟಪಾಡಿ ನಿವಾಸಿ ಅಕ್ಷಯ್ (33) ಮೃತಪಟ್ಟಿದ್ದಾರೆ.
ಅಕ್ಷಯ್ ಸುರತ್ಕಲ್ ನಲ್ಲಿ ಸಂಬಂಧಿಕರ ಮನೆಗೆ ಬಂದು ಬೈಕಿನಲ್ಲಿ ಉಡುಪಿಯತ್ತ ತೆರಳುತ್ತಿದ್ದರು. ಗೋವಿಂದಾಸ ಕಾಲೇಜು ಸಮೀಪದ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ಬೈಕ್ ಸ್ಕಿಡ್ ಆಗಿದ್ದು ರಸ್ತೆಗೆ ಬಿದ್ದ ಸವಾರನ ಮೇಲೆಯೇ ಲಾರಿ ಹರಿದು ಹೋಗಿದೆ. ಲಾರಿಯ ಹಿಂದಿನ ಚಕ್ರ ಸವಾರನ ಮೇಲೆ ಹರಿದಿದ್ದು, ಯುವಕ ಸ್ಥಳದಲ್ಲೇ ಸಾವು ಕಂಡಿದ್ದಾರೆ.