ಜಿಲ್ಲೆ

ರಾಮ ಮಂದಿರ ಸರ್ಕಲ್‌ದಲ್ಲಿ ಕಾರ್ ಡಿಕ್ಕಿ ಮಹಿಳೆ ಸಾವು


ಕಲಬುರಗಿ ನಗರದ ರಾಮ ಮಂದಿರ ಸರ್ಕಲ್ ಬಳಿ ವೇಗವಾಗಿ ಬಂದ ಕಾರ್ ಡಿಕ್ಕಿ ಹೊಡೆದು ಮಹಿಳೆಯೊಬ್ಬರು ಮೃತಪಟ್ಟ  ಹೃದಯ ವಿದ್ರಾವಕ ಘಟನೆ ನಡೆದಿದೆ. ಮೇಲಿಂದ ಮೇಲೆ ಇಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಈಗ ಮಹಿಳೆ ಬಲಿ ಪಡೆದಂತಾಗಿದೆ.
ಸಾಹೇಬ ಬಿ ಖಾಜಾಹುಸೇನ್ (೫೦)  ಎಂಬುವರೇ ಮೃತಪಟ್ಟಿರುವ ಮಹಿಳೆ. ಚಿತ್ತಾಪುರ ತಾಲೂಕಿನ ಕಡಬೂರು ಗ್ರಾಮದ ಅವರು ಕಲಬುರಗಿ ನಗರದಲ್ಲಿರುವ ಮಗಳನ್ನು ಭೇಟಿ ಮಾಡಲು ಬಂದಿದ್ದರು.
ಮಗಳನ್ನು ಭೇಟಿ ಮಾಡಿ ಮರಳಿ ಊರಿಗೆ ಹೋಗಲು ರಾಮ ಮಂದಿರ ಬಳಿಯಲ್ಲಿ ಶಹಾಬಾದ ರಸ್ತೆಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದರು. ಈ ವೇಳೆಯಲ್ಲಿ ವೇಗವಾಗಿ ಬಂದ ಕಾರ್ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಸಂಚಾರ ಠಾಣೆ-೧ರಲ್ಲಿ ಪ್ರಕರಣ ದಾಖಲಾಗಿದೆ.