ಜಿಲ್ಲೆ

ಮಾರುಕಟ್ಟೆಗೆ ಟೊಮ್ಯಾಟೋ ಲೋಡು ಸಾಗಾಣೆ ವೇಳೆ ಅಪಘಾತ, ಗಾಯಾಳು ತಂದೆಯ ಎದುರೇ ಮಗ ಸಾವು

Rest of Bengaluru - Chikkaballapura - Venkatesh

ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಚಿನ್ನಸಂದ್ರದ ಭಾರತ್ ಪೆಟ್ರೋಲ್ ಬಂಕ್ ಬಳಿ ಖಾಸಗಿ ಬಸ್ ಮತ್ತು ಟ್ರಾಕ್ಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮಗ ಮೃತಪಟ್ಟು, ತಂದೆ ಗಂಭೀರವಾಗಿ ಗಾಯಗೊಂಡಿದ್ದಾರೆ.
ಚಿಂತಾಮಣಿ ತಾಲೂಕಿನ ನರ‍್ನಕಲ್ ಭಾರ್ಗವ್ (17) ಸ್ಥಳದಲ್ಲಿಯೇ ಮೃತಪಟ್ಟಿದ್ದು ಈತನ ತಂದೆ ಅಶ್ವತ್ಥ (50೦) ಗಾಯಾಳು.
ತಂದೆ ಮಗ ಟ್ರಾಕ್ಟರ್‌ನಲ್ಲಿ ಟೊಮ್ಯಾಟೋ ಕ್ರೇಟ್‌ಗಳನ್ನು ಹಾಕಿಕೊಂಡು, ಚಿಂತಾಮಣಿ ಎಪಿಎಂಸಿ ಮಾರುಕಟ್ಟೆಗೆ ಶುಕ್ರವಾರ ಬೆಳಗಿನ ಜಾವ ತೆರಳುತ್ತಿದ್ದರು. ಇದೇ ವೇಳೆ ಬೆಂಗಳೂರಿನಿಂದ ಚಿಂತಾಮಣಿ ಕಡೆಗೆ ಬರುತ್ತಿದ್ದ ಕೋಲಾರ ತಾಲೂಕಿನ ನರಸಾಪುರ ಇಂಡಸ್ಟ್ರೀಯಲ್ ಏರಿಯಾದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಇದರ ವೇಗದ ರಭಸದಲ್ಲಿ ಟ್ರಾಕ್ಟರ್ ಅನ್ನು ರಸ್ತೆಯಲ್ಲಿ 20 ಅಡಿ ಎಳೆದುಕೊಂಡು ಹೋಗಿದೆ. ಟ್ರಾಕ್ಟರ್ ಇಂಜಿನ್ ಪಕ್ಕದಲ್ಲಿ ಕುಳಿತ್ತಿದ್ದ ಭಾರ್ಗವ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಅಪಘಾತ ಸಂಭವಿಸುತ್ತಿದ್ದಂತೆ ಬಸ್ಸಿನ ಚಾಲಕ ಪರಾರಿಯಾಗಿದ್ದಾನೆ. ಇಡೀ ರಸ್ತೆಯಲ್ಲಿ ಬಿದ್ದಿದ್ದ ಟೊಮ್ಯಾಟೋ ಕ್ರೇಟ್‌ಗಳನ್ನು ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಚಿಂತಾಮಣಿ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.