ಕಡಬ: ಕೋಡಿಂಬಾಳ ಸಮೀಪ ಚಲಿಸುತ್ತಿದ್ದ ಸ್ಕೂಟಿಯ ಮೇಲೆ ದೂಪದ ಮರ ಬಿದ್ದು ಬೈಕ್ ಸವಾರ ಎಡಮಂಗಲ ಗ್ರಾಮದ ದೇವಸ್ಯ ನಿವಾಸಿ ಸೀತಾರಾಮ ಅವರು ಮೃತಪಟ್ಟಿದ್ದು ಅವರು ಕೋಡಿಂಬಾಳದಿಂದ ತನ್ನ ಮನೆಗೆ ಹರಕೆಗಾಗಿ ಕೋಳಿ ಯನ್ನು ಕೊಂಡೊಯ್ಯುತ್ತಿದ್ದು ಈ ದುರ್ಘಟನೆಯಲ್ಲಿ ಕೋಳಿ ಮಾತ್ರ ಅಪಾಯದಿಂದ ಪಾರಾಗಿ ಕಳೆದೆರಡು ದಿನಗಳಿಂದ ಘಟನಾ ಸ್ಥಳದ ಬದಿಯಲ್ಲಿಯೇ ಮರದ ಗೆಲ್ಲಿನಲ್ಲಿ ಕುಳಿತು ಮೂಕರೋಧನ ವ್ಯಕ್ತಪಡಿಸುವಂತೆ ಕಾಣುತ್ತಿದೆ. ಅಲ್ಲದೆ ಎರಡು ದಿನ ಕಳೆದರೂ ನುಜ್ಜು ಗುಜ್ಜಾದ ಸ್ಕೂಟಿ ಕೂಡ ಸ್ಥಳದಲ್ಲಿ ಅನಾಥವಾಗಿ ಬಿದ್ದಿದೆ.
ಮೂಕರೋಧನ ವ್ಯಕ್ತಪಡಿಸುವಂತೆ ಕಾಣುತ್ತಿರುವ ಕೋಳಿಯನ್ನು ಮೃತರ ಕುಟುಂಬದವರು ಕೊಂಡೊಯ್ಯುವುದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಅದಲ್ಲದೆ ಎರಡು ದಿನ ಕಳೆದರೂ ನುಜ್ಜು ಗುಜ್ಜಾದ ಸ್ಕೂಟಿ ಕೂಡ ಅನಾಥವಾಗಿ ಬಿದ್ದಿದೆ. ಮರದ ಗೆಲ್ಲಿನಲ್ಲಿ ಕುಳಿತಿರುವ ಕೋಳಿಯನ್ನು ಮುಂದೆನು ಮಾಡಬಹುದು ಎನ್ನು ಪ್ರಶ್ನೆಗೆ ಯಾರಲ್ಲಿಯೂ ಉತ್ತರ ಇಲ್ಲದಂತೆ ಕಾಣುತ್ತಿದೆ.