ರಬಕವಿಯಲ್ಲಿ ನಡೆದ ಕಾರ್ಮಿಕರ ಸಭೆಯಲ್ಲಿ ಬನಹಟ್ಟಿ ಪಿಎಸ್‌ಐ ಶಾಂತಾ ಹಳ್ಳಿ ಮಾತನಾಡಿದರು. ಗೋಪಾಲ್ ಕಾಬ್ರಾ, ಸಿದ್ದು ಅಸ್ಕಿ ಇತರರಿದ್ದರು. 
ಜಿಲ್ಲೆ

ಏಕಾಗ್ರತೆಯಿದ್ದಲ್ಲಿ ಅಪಘಾತ ತಡೆ ಸಾಧ್ಯ

ರಬಕವಿ/ಬನಹಟ್ಟಿ: ವಾಹನ ಚಾಲನೆ ಮಾಡುವಾಗ ಚಾಲಕರು ಏಕಾಗ್ರತೆ ರೂಢಿಸಿಕೊಂಡರೆ ಅಪಘಾತಗಳನ್ನು ತಡೆಗಟ್ಟಬಹುದು ಎಂದು ಬನಹಟ್ಟಿ ಪಿಎಸ್‌ಐ ಶಾಂತಾ ಹಳ್ಳಿ ತಿಳಿಸಿದರು.

ರಬಕವಿಯ ಡಾ. ರವಿ ಜಮಖಂಡಿಯವರ ಲೇಔಟ್ ಸಭಾಂಗಣದಲ್ಲಿ ಪ್ಲಂಬರ್ ಕಾರ್ಮಿಕರ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ರೈತರು ತಮ್ಮ ಚಕ್ಕಡಿ ಹಾಗೂ ಟ್ರಾೃಕ್ಟರ್ ಟೇಲರ್‌ಗಳಿಗೆ ರೇಡಿಯಂ ಹಚ್ಚಿದರೆ ಅಪಘಾತ ಕಡಿಮೆಗೊಳಿಸಬಹುದು. ಪ್ರತಿಯೊಬ್ಬರೂ ಸಂಚಾರಿ ನಿಯಮಗಳನ್ನು ಪಾಲಿಸಬೇಕು ಎಂದರು.

ನೂರಾರು ಕಾರ್ಮಿಕರಿಗೆ ಆಶೀರ್ವಾದ ಸಂಸ್ಥೆಯಿಂದ ಉಚಿತವಾಗಿ ಹೆಲ್ಮೆಟ್ ವಿತರಿಸಲಾಯಿತು. ಸೂಫೀ ಕುಡಚಿ, ಸಿದ್ದು ಅಸ್ಕಿ, ಗೋಪಾಲ ಕಾಬರಾ, ಬಿ. ಕೆ. ಕುಂಬಾರ, ಆರ್. ಬಿ. ಕೋಲೂರ, ಸಿ. ಸಿ. ಮಹಾಲಿಂಗಪೂರ ಇತರರಿದ್ದರು.