ನಾಪೋಕ್ಲು: ಕಾರು ಮತ್ತು ಆಟೋರಿಕ್ಷಾ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಆಟೋ ಚಾಲಕನಿಗೆ ಗಂಭೀರ ಗಾಯವಾದ ಘಟನೆ ಬೊಳಿಬಾಣೆ ಎಂಬಲ್ಲಿ ಮಂಗಳವಾರ ನಡೆದಿದೆ.
ಮೂರ್ನಾಡಿನಿಂದ ನಾಪೋಕ್ಲುವಿನತ್ತ ಚಲಿಸುತ್ತಿದ್ದ ಆಟೋಗೆ ನಾಪೋಕ್ಲುವಿನಿಂದ ಮೂರ್ನಾಡಿನತ್ತ ಹೊರಟಿದ್ದ ಕಾರು ಡಿಕ್ಕಿ ಹೊಡೆಯಿತು. ಆಟೋರಿಕ್ಷಾ ಜಖಂಗೊಂಡಿದ್ದು, ಚಾಲಕ ಕೊಕೇರಿ ಮಚ್ಚಂಡ ಶಂಭು ಎಂಬವರಿಗೆ ಗಾಯವಾಗಿದೆ. ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ವಹಿಸಿದ್ದಾರೆ.