ಬೇಲೂರು: ಪತ್ರಕರ್ತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾ ಪತ್ರಕರ್ತರ ಸಂಘದಿಂದ ಎಲ್ಲ ಸದಸ್ಯರಿಗೂ ಅಪಘಾತ ವಿಮೆ ಮಾಡಿಸಿರುವುದು ಶ್ಲಾಘನೀಯವಾಗಿದೆ ಎಂದು ಬೇಲೂರು ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ರೇವಣ್ಣ ಹೇಳಿದರು.
ಪಟ್ಟಣದ ಪತ್ರಕರ್ತರ ಸಂಘದಲ್ಲಿ ಗುರುವಾರ ಆಯೋಜಿಸಿದ್ದ ಅಪಘಾತ ವಿಮೆ ಬಾಂಡ್ ವಿತರಿಸಿ ಮಾತನಾಡಿದರು.
ಹಿರಿಯ ಪತ್ರಕರ್ತ ತೋ.ಚ.ಅನಂತ ಸುಬ್ಬರಾಯ, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ವಾಮಿಗೌಡ, ಹಿರಿಯ ಪತ್ರಕರ್ತ ಮಾ.ಶಿವಮೂರ್ತಿ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷೆ ಭಾರತೀಗೌಡ, ಜಿಲ್ಲಾ ಉಪಾಧ್ಯಕ್ಷ ಡಿ.ಬಿ.ಮೋಹನ್ ಕುಮಾರ್, ಪ್ರಧಾನ ಕಾರ್ಯದರ್ಶಿ ತಾರಾನಾಥ್, ಉಪಾಧ್ಯಕ್ಷ ಜಗದೀಶ್, ನಿರ್ದೇಶಕರಾದ ಬಿ.ಎಲ್.ಲಕ್ಷ್ಮಣ್, ಮಲ್ಲೇಶ್, ಚಂದ್ರಶೇಖರ್, ರಮೇಶ್, ನಿಂಗರಾಜು, ಆರಾಧ್ಯ, ಮಹೇಶ್‌ಗೌಡ. ಪತ್ರಕರ್ತ ಸಂತೋಷ್ ಇದ್ದರು.