ಬೆಳಗಾವಿ; ಟಿಪ್ಪರ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಸೋಮವಾರ ಗೋವಾವೆಸ್ ನಲ್ಲಿ ನಡೆದಿದೆ. ರಸ್ತೆ ಕ್ರಾಸ್ ಮಾಡಿ ಮಾರುಕಟ್ಟೆ ಕಡೆ ಹೋಗುತ್ತಿರುವ ಸಂದರ್ಭದಲ್ಲಿ ರಸ್ತೆಯಲ್ಲಿ ಜೋರಾಗಿ ಬಂದ ಟಿಪ್ಪರ ಲಾರಿ ಡಿಕ್ಕಿ ಹೊಡೆದಿದೆ. ಮಹಿಳೆ ಯಾರು ಎಂಬುದು ಖಚಿತವಾಗಿಲ್ಲ. ಸಂಚಾರಿ ಪೊಲೀಸರು ವಾಹನ ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.