ಜಿಲ್ಲೆ

ಶಿವಮೊಗ್ಗದಲ್ಲಿ ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಅಪಘಾತ: ಅಭಿಮಾನಿ ಸ್ಥಳದಲ್ಲೇ ಸಾವು

RCB: ಆರ್​ಸಿಬಿ ತಂಡ ಐಪಿಎಲ್​​​​ನಲ್ಲಿ ಗೆಲುವು ಸಾಧಿಸಿದ ಹಿನ್ನೆಲೆ ಮಂಗಳವಾರ ರಾತ್ರಿ (ಜೂ.3) ಅಭಿಮಾನಿಗಳ ಸಂಭ್ರಮಾಚರಣೆ ವೇಳೆ ಬೈಕ್​​ ಅಪಘಾತದಲ್ಲಿ ಯುವಕನೊಬ್ಬ ಸಾವನ್ನಪ್ಪಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ವೆಂಕಟೇಶ್ ನಗರದ ನಿವಾಸಿ ಅಭಿನಂದನ್​​ (21) ಮೃತಪಟ್ಟಿದ್ದಾನೆ.

ಆರ್​ಸಿಬಿ ವಿಜಯೋತ್ಸವಕ್ಕಾಗಿ ಯುವಕರ ಗುಂಪು ಬೈಕ್​​ ರ್ಯಾಲಿಯನ್ನು ಏರ್ಪಡಿಸಿತ್ತು. ಈ ಮೆರವಣಿಗೆಯ ವೇಳೆ ಎರಡು ಬೈಕ್‌ಗಳು ಮುಖಾಮುಖಿ ಡಿಕ್ಕಿ ಹೊಡೆದಿದ್ದು, ತೀವು ಗಾಯಗೊಂಡ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಅಪಘಾತ ನಡೆದ ತಕ್ಷಣ ಸ್ನೇಹಿತರು ಸಹಾಯ ಮಾಡಲು ಧಾವಿಸಿದರು, ಆದರೆ ಅಭಿನಂದನ್​ ಪ್ರಾಣಪಕ್ಷಿ ಆಗಲೇ ಹಾರಿಹೋಗಿತ್ತು.

ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. (ಏಜೆನ್ಸೀಸ್​)