ಜಿಲ್ಲೆ

ಪ್ರತ್ಯೇಕ ಎರಡು ಅಪಘಾತ ಪ್ರಕರಣದ ಇಬ್ಬರು ಅಪರಾಧಿಗಳಿಗೆ ಜೈಲು ಶಿಕ್ಷೆ

Haveri - Kariyappa Aralikatti

ರಾಣೆಬೆನ್ನೂರ: ಕಾರು ಹಾಗೂ ಟ್ರೃಕ್ಟರ್ ಡಿಕ್ಕಿ ಪಡಿಸಿ ಇಬ್ಬರ ಸಾವಿಗೆ ಕಾರಣವಾದ ಪ್ರತ್ಯೇಕ ಎರಡು ಪ್ರಕರಣದ ಇಬ್ಬರು ಅಪರಾಧಿಗಳಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಇಲ್ಲಿಯ 1ನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಬಿ. ಸಿದ್ಧರಾಜು ಮಂಗಳವಾರ ತೀರ್ಪು ನೀಡಿ ಆದೇಶಿಸಿದ್ದಾರೆ.
ರಟ್ಟಿಹಳ್ಳಿ ತಾಲೂಕಿನ ಲಿಂಗದೇವರಕೊಪ್ಪದ ನಿವಾಸಿ ಮಲ್ಲಿಕಾರ್ಜುನ ಬಸನಗೌಡ ಆನ್ವೇರಿ ಹಾಗೂ ರಾಣೆಬೆನ್ನೂರ ನಗರದ ಉಮೇಶ ಕೋಟ್ರೇಶ ಅಜ್ಜೇವಡಿಮಠ ಶಿಕ್ಷೆಗೊಳಗಾದ ಅಪರಾಧಿಗಳು.
ಪ್ರಕರಣದ ಒಂದರ ಅಪರಾಧಿ ಮಲ್ಲಿಕಾರ್ಜುನ 2022 ಜುಲೈ 8ರಂದು ತಾನು ಚಲಾಯಿಸುತ್ತಿದ್ದ ಟ್ರಾೃಕ್ಟರ್‌ಅನ್ನು ತಾಲೂಕಿನ ಎರೇಕುಪ್ಪಿ ರಸ್ತೆಯಲ್ಲಿ ಆಟೋರಿಕ್ಷಾಗೆ ಡಿಕ್ಕಿ ಪಡಿಸಿ ಅದರಲ್ಲಿ 5 ಜನ ಗಾಯಗೊಂಡು ಲಲಿತಾ ರಾಮಚಂದ್ರಪ್ಪ ಸಣ್ಣಮನಿ ಎಂಬುವರು ಮೃತಪಡುವಂತೆ ಮಾಡಿದ್ದ. ಸಾಕ್ಷಾೃಧಾರಗಳ ಸಮೇತ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಅಪರಾಧಿಗೆ 1 ವರ್ಷ ಜೈಲು ಶಿಕ್ಷೆ ಹಾಗೂ 6900 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಎರಡನೇ ಪ್ರಕರಣದ ಅಪರಾಧಿ ಉಮೇಶ 2022 ಜುಲೈ 7ರಂದು ತಾನು ಚಲಾಯಿಸುತ್ತಿದ್ದ ಕಾರನ್ನು ತಾಲೂಕಿನ ಕಮದೋಡ ಸೇತುವೆ ಬಳಿ ರಸ್ತೆ ಬದಿ ಮೇಕೆ ಮೇಯಿಸುತ್ತ ನಿಂತಿದ್ದ ಕಮದೋಡ ಗ್ರಾಮದ ರಾಮಪ್ಪ ಹಾಲಪ್ಪ ಮೀಸೇರ ಎಂಬುವರಿಗೆ ಡಿಕ್ಕಿ ಪಡಿಸಿ ಮೃತಪಡುವಂತೆ ಮಾಡಿದ್ದ. ಸಾಕ್ಷಾೃಧಾರಗಳ ಸಮೇತ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಅಪರಾಧಿಗೆ 1 ವರ್ಷ ಜೈಲು ಶಿಕ್ಷೆ ಹಾಗೂ 5900 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಎರಡು ಪ್ರಕರಣದ ಕುರಿತು ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಇಂಧುಮತಿ ಸಿದ್ನೂರಕರ ವಾದ ಮಂಡಿಸಿದ್ದರು.