ಜಿಲ್ಲೆ

ಕಾರು ಡಿಕ್ಕಿಯಾಗಿ ಸ್ಕೂಟರ್ ಸವಾರನಿಗೆ ಗಾಯ

ಸೌಮ್ಯ ಆರ್

ಕೋಟ: ಸಾಸ್ತಾನದ ಪಾಂಡೇಶ್ವರದಲ್ಲಿ ಸೋಮವಾರ ಕಾರು-ಸ್ಕೂಟರ್ ನಡುವೆ ಅಪಘಾತವಾಗಿದ್ದು, ಸ್ಕೂಟರ್ ಸವಾರನಿಗೆ ಗಾಯಗಳಾಗಿವೆ. ಸಾಸ್ತಾನ ಪಾಂಡೇಶ್ವರದ ನಿವಾಸಿ ಸತೀಶ ಎಂಬುವರೇ ಗಾಯಗೊಂಡವರು. ಅವರು ಪಾಂಡೇಶ್ವರ ತಮ್ಮ ಸ್ಕೂಟರ್‌ನಲ್ಲಿ ಪಾಂಡೇಶ್ವರ ಪಂಚಾಯಿತಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಂದರ್ಭ ಎದುರಿನಿಂದ ಅತಿವೇಗ ಹಾಗೂ ಅಜಾಗರೂಕತೆಯಿಂದ ಬಂದ ಕಾರು ಡಿಕ್ಕಿ ಹೊಡೆದಿದ್ದು, ಬಳಿಕ ಸಮೀಪದಲ್ಲೇ ಇದ್ದ ವಿದ್ಯುತ್ ಕಂಬ ಹಾಗೂ ಮನೆಯ ಆವರಣ ಗೋಡೆಗೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಸತೀಶ್ ಅವರ ಕೈ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಸಾಸ್ತಾನದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.