ಜಿಲ್ಲೆ

ಬೈಕ್‌ -ಸ್ಕೂಟಿ ನಡುವೆ ಅಪಘಾತ

Uttara Kannada - Subash Hegde

ಸಿದ್ದಾಪುರ: ತಾಲೂಕಿನ ಶಿರೂರು-ವಂದಾನೆ ನಡುವಿನ ಮರಿಸಾಲ ಎಂಬಲ್ಲಿ ಬೈಕ್‌ ಹಾಗೂ ಸ್ಕೂಟರ್‌ ನಡುವೆ ಡಿಕ್ಕಿ ಸಂಭವಿಸಿ ನಾಲ್ವರು ಗಾಯಗೊಂಡ ಘಟನೆ ಸೋಮವಾರ ನಡೆದಿದೆ.

ಬೈಕ್‌ ಚಾಲಕ ತ್ಯಾರ್ಸಿ ಕಾನಳ್ಳಿಯ ಜೈಶೀಲ ಕೆರಿಯಾ ಹಸ್ಲರ, ಗಿರೀಶ ಹನುಮಂತ ಹಸ್ಲರ, ಸ್ಕೂಟಿ ಚಾಲಕ ಕೃಷ್ಣಮೂರ್ತಿ ರಾಮಾ ನಾಯ್ಕ, ಹಿಂಬದಿ ಸವಾರೆ ಜಯಲಕ್ಷ್ಮೀ ವೆಂಕಟರಮಣ ನಾಯ್ಕ ಗಾಯಗೊಂಡವರು. ಎಲ್ಲರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.