ಜಿಲ್ಲೆ

ಅಪಘಾತ ಬೆಸ್ಕಾಂ ನೌಕರ ಸಾವು

ಗಂಗಾಧರ ಬಿ ವಿ

ಮಾಗಡಿ. ಬೈಕ್ ಗೆ ಕಾರು ಡಿಕ್ಕಿ ಬೈಕ್ ಸವಾರ ಬೆಸ್ಕಾಂ ಲೈನ್ ಮ್ಯಾನ್ ಮೃತಪಟ್ಟಿರುವ ಘಟನೆ ಮಾಗಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

  ತಾಲೂಕಿನ ತಗ್ಗಿಕುಪ್ಪೆ ಗ್ರಾಮದ ನಿವಾಸಿ ಧನಂಜಯ (56) ಮೃತಪಟ್ಟ ದುರ್ದೌವಿ,  ಹುಲಿಯೂರು ದುರ್ಗ  ಹಳೆಯೂರಮ್ಮನ ದೇವಾಲಯದ ಬಳಿ ತಗ್ಗಿಕುಪ್ಪೆ ಗ್ರಾಮದವರೊಬ್ಬರ ನಾಮಕರಣ ಕ್ಕೆ ತೆರಳುವ ಮಾರ್ಗ ಮಧ್ಯೆ ನಡೆದಿದೆ.

ಹುಲಿಯೂರು ದುರ್ಗ ಕಾಡು ಬಳಿ  ಬೈಕ್ ನಲ್ಲಿ ತೆರಳುವ ವೇಳೆ ಕಾರು ಡಿಕ್ಕಿಹೊಡೆದ‌ ರಭಸಕ್ಕೆ  ಕಾಲುಗಳಿಗೆ ತೀವ್ರ ಗಾಯ ಗೊಂಡು ರಕ್ತ ಸ್ರಾವ ವಾಗಿ ಮಾಗಡಿ ಸರ್ಕಾರಿ ಅಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.