ಜಿಲ್ಲೆ

ಪಡೀಲ್ ಅಂಡರ್‌ಪಾಸ್‌ನಲ್ಲಿ ಅಪಘಾತ ಓರ್ವ ಮೃತ್ಯು, ಇಬ್ಬರಿಗೆ ಗಾಯ

ಮಂಗಳೂರು: ಪಡೀಲ್ ಅಂಡರ್‌ಪಾಸ್‌ನಲ್ಲಿ ಗುರುವಾರ ಬೈಕೊಂದು ಅಪಘಾತಕ್ಕೀಡಾಗಿ ಓರ್ವ ವಿದ್ಯಾರ್ಥಿ ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.


ಬಜಾಲ್ ಪಲ್ಲಕೆರೆ ನಿವಾಸಿ ಭವಿನ್‌ರಾಜ್ (20) ಮೃತಪಟ್ಟ ಯುವಕ. ಗಾಡ್ವಿನ್ (19) ಮತ್ತು ಆಶಿತ್ (17) ಗಾಯಗೊಂಡಿದ್ದಾರೆ.


ನಗರದ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ ಭವಿನ್ ಅವರು ಗುರುವಾರ ಮಧ್ಯಾಹ್ನ ತನ್ನ ಗೆಳೆಯರ ಜತೆ ಬೈಕ್‌ನಲ್ಲಿ ಬರುತ್ತಿದ್ದಾಗ ಪಡೀಲ್ ಅಂಡರ್‌ಪಾಸ್ ಬಳಿ ಬೈಕ್ ನಿಯಂತ್ರಣ ತಪ್ಪಿ ಅಂಡರ್‌ಪಾಸ್ ುಟ್‌ಪಾತ್‌ಗೆ ಡಿಕ್ಕಿಯಾಗಿದೆ. ಇದರಿಂದ ಮೂವರು ಗಾಯಗೊಂಡಿದ್ದು, ಭವಿನ್‌ರಾಜ್ ಮೃತಪಟ್ಟಿದ್ದಾರೆ. ತಂದೆ, ತಾಯಿ ಮತ್ತು ಅಕ್ಕನನ್ನು ಅಗಲಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.