ಜಿಲ್ಲೆ

ಆಗುಂಬೆಯಲ್ಲಿ ಭೀಕರ ಅಪಘಾತ:ನಾಲ್ವರ ದುರ್ಮರಣ, ಐವರು ಗಂಭೀರ

Udupi

ಹೆಬ್ರಿ: ಆಗುಂಬೆ ಘಾಟಿಯ ಐದನೇ ತಿರುವಿನಲ್ಲಿ ಶುಕ್ರವಾರ ಭೀಕರ ಅಪಘಾತ ಸಂಭವಿಸಿದ್ದು, ಈಚರ್ ವಾಹನ ಪಲ್ಟಿಯಾಗಿ ಅದರಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ. ಇತರ ಐವರು ಗಂಭೀರ ಗಾಯಗೊಂಡಿದ್ದಾರೆ. ಸ್ಥಳಕ್ಕಾಗಮಿಸಿದ ಹೆಬ್ರಿ ಠಾಣಾ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಶಿವಮೊಗ್ಗದಿಂದ ಹೆಬ್ರಿ ಕಡೆಗೆ ಬರುತ್ತಿದ್ದ ಈಚರ್ ಲಾರಿ ಘಾಟಿ ರಸ್ತೆಯ 5ನೇ ತಿರುವಿನಲ್ಲಿ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದಿದೆ. ಮೃತಪಟ್ಟ ನಾಲ್ವರು ಕಾರ್ಕಳ ತಾಲೂಕಿನ ಮಿಯ್ಯರು ಮೂಲದವರು ಎಂದು ತಿಳಿದು ಬಂದಿದೆ.