ಮಡಿಕೇರಿ:
ಕೊಡಗಿನಲ್ಲಿ ವರ್ಷದಿಂದ ವರ್ಷಕ್ಕೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಲೇ ಇರುವುದು ಆತಂಕಕ್ಕೆ ಕಾರಣವಾಗಿದೆ. 2022ರಿಂದ ಈಚೆಗೆ ಈ ವರ್ಷದ ಜುಲೈ ಅಂತ್ಯದ ತನಕ ಒಟ್ಟು 1,767 ಅಪಘಾತ ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿದೆ. ಈ ಅಪಘಾತಗಳಿಂದಾಗಿ 283 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದು, 1,331 ಜನ ವಿವಿಧ ರೀತಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ವರ್ಷದ ಜನವರಿಯಿಂದ ಜುಲೈ ತನಕದ ಅವಧಿಯಲ್ಲೇ 313 ಅಪಘಾತ ಪ್ರಕರಣಗಳು ಕೊಡಗಿನಲ್ಲಿ ದಾಖಲಾಗಿದ್ದು, 45 ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಏರು-ತಗ್ಗು, ದೊಡ್ಡ ದೊಡ್ಡ ತಿರುವುಗಳಿಂದ ಕೂಡಿರುವ ಕೊಡಗಿನ ರಸ್ತೆಗಳಲ್ಲಿ ವಾಹನಗಳ ಚಾಲನೆ ಚಾಲಕರ ಪಾಲಿಗೆ ದೊಡ್ಡ ಸವಾಲಾಗಿದೆ. ಎಷ್ಟು ಎಚ್ಚರಿಕೆಯಿಂದ ಓಡಿಸಿದರೂ ಅಲ್ಲಲ್ಲಿ ಅಪಾಯಗಳು ಎದುರಾಗುತ್ತಲೇ ಇರುತ್ತದೆ. ಕೊಡಗಿನ ಮೂಲಕ ರಾಷ್ಟಿçÃಯ ಹೆದ್ದಾರಿ 275, ರಾಜ್ಯ ಹೆದ್ದಾರಿಗಳು ಹಾದು ಹೋಗಿದ್ದರೂ ಇವುಗಳ ಅಗಲ ಕಡಿಮೆ ಇದೆ. ಹಾಗಾಗಿ ವಾಹನಗಳ ದಟ್ಟಣೆ ಹೆಚ್ಚುತ್ತಿದ್ದಂತೆಯೇ ಅಪಘಾತಗಳ ಸಂಖ್ಯೆಯೂ ಏರುಗತಿ ಪಡೆದುಕೊಂಡಿದೆ.
ಹೆದ್ದಾರಿಗಳಲ್ಲಿ ಸಂಭವಿಸುವ ಬಹುತೇಕ ಅಪಘಾತಗಳಿಗೆ ಚಾಲಕನ ಲೋಪವೇ ಕಾರಣ ಎನ್ನುವುದನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಬಿಡುಗಡೆ ಮಾಡಿರುವ ವರದಿಯಲ್ಲಿ ಹೇಳಲಾಗಿದೆ. ಅತಿ ವೇಗದ ಚಾಲನೆ, ಅಪಾಯಕಾರಿ ಸ್ಥಳಗಳಲ್ಲಿ ವೇಗ ಮಿತಿ ನಿಗದಿ ಮಾಡಿದ್ದರೂ ನಿರ್ಲಕ್ಷö್ಯ, ತಿರುವುಗಳಲ್ಲಿ ಬೇಜವಾಬ್ದಾರಿ ಚಾಲನೆ.. ಹೀಗೆ ಹಲವು ವಿಷಯಗಳಿಂದಲೂ ಅಪಘಾತಗಳು ಉಂಟಾಗುತ್ತಿರುತ್ತದೆ. ಹೆದ್ದಾರಿಗಳ ದುಸ್ಥಿತಿ, ಸೂಕ್ತ ರೀತಿಯಲ್ಲಿ ಸೂಚನಾ ಫಲಕಗಳು ಅಳವಡಿಸದಿರುವುರಿಂದಲೂ ಅಪಘಾತಗಳು ಸಂಭವಿಸುತ್ತವೆ ಎನ್ನುವ ಅಭಿಪ್ರಾಯವೂ ಪೊಲೀಸ್ ಅಧಿಕಾರಿಗಳಿಂದ ವ್ಯಕ್ತವಾಗುತ್ತದೆ.
ಕೊಡಗಿನಲ್ಲಿ ಹೆಚ್ಚು ಅಪಘಾತಗಳು ಸಂಭವಿಸುವ 8 ಸ್ಥಳಗಳನ್ನು ಬ್ಲಾö್ಯಕ್ ಸ್ಪಾಟ್‌ಗಳಾಗಿ ಗುರುತಿಸಲಾಗಿದೆ. ಈ ಎಲ್ಲಾ ವಿಷಯಗಳ ಬಗ್ಗೆ ವಿಜಯವಾಣಿ ಓದುಗರು ಲೌಡ್ ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊAಡಿದ್ದಾರೆ.
ರಾಜ್ಯ ಹೆದ್ದಾರಿಗಳು ಮತ್ತು ಗ್ರಾಮಾಂತರ ರಸ್ತೆಗಳು ಈಚೆಗೆ ಯಾವುದೇ ಅಭಿವೃದ್ಧಿ ಕಾಮಗಾರಿ ಕಾಣದೆ ಹೊಂಡ ಗುಂಡಿಗಳಿAದ ತುಂಬಿದೆ. ಇದರಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ. ಗುಂಡಿ ತಪ್ಪಿಸಲು ಹೋಗಿ ವಾಹನ ವಾಹನಗಳಿಗೆ ಡಿಕ್ಕಿ ಹೊಡೆಯುವಂತಾಗಿದೆ. ಇದರಿಂದ ಪ್ರಾಣ ಹಾನಿ ಹೆಚ್ಚಾಗುತ್ತಿದೆ. ಪ್ರವಾಸಿ ವಾಹನಗಳ ಅತಿ ಹೆಚ್ಚು ಆಗಮನ ಮತ್ತು ಅತಿ ವೇಗದ ಚಾಲನೆ ಹಾಗೂ ಸಂಚಾರ ನಿಯಮಗಳ ಪಾಲನೆ ಮಾಡದಿರುವುದು ಕೂಡ ಇದಕ್ಕೆ ಕಾರಣವಾಗಿದೆ.
ಕಾಳೇರಮ್ಮನ ಹರೀಶ್, ಅವಂದೂರು ಗ್ರಾಮ
ಜಿಲ್ಲೆಯಲ್ಲಿ ಪ್ರಮುಖ ಹೆದ್ದಾರಿ ಸೇರಿದಂತೆ ಉಳಿದ ರಸ್ತೆಗಳೂ ಹದಗೆಟ್ಟಿವೆ. ಇದರಲ್ಲಿ ವಾಹನ ಸವಾರರಿಗೆ ಚಲಾಯಿಸುವುದು ಸವಾಲಿನ ಕೆಲಸ. ಇಂತಹ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಹೆಚ್ಚು ಅಪಘಾತಕ್ಕೆ ಈಡಾಗುತ್ತಿದ್ದಾರೆ. ಜಿಲ್ಲಾಡಳಿತ ಮೊದಲು ರಸ್ತೆಯನ್ನು ಉತ್ತಮಗೊಳಿಸಿದರೆ ಅಪಘಾತದ ಸಂಖ್ಯೆ ಕೂಡ ಗಣನೀಯವಾಗಿ ಇಳಿಕೆ ಕಾಣಬಹುದು.
ಕೆ.ಎ. ಜಶ್ಮಿ, ಉಪನ್ಯಾಸಕಿ, ಕಾವೇರಿ ಕಾಲೇಜು, ಗೋಣಿಕೊಪ್ಪಲು
ಕೊಡಗು ಜಿಲ್ಲೆಯಲ್ಲಿ ಮಳೆಗಾಲದ ಸಂದರ್ಭ ಮುಖ್ಯರಸ್ತೆ ಒಳಗೊಂಡAತೆ ಎಲ್ಲಾ ರಸ್ತೆಗಳು ಗುಂಡಿ ಬಿದ್ದು ಸಂಚಾರ ಕಷ್ಟ ಸಾಧ್ಯವಾಗುತ್ತಿದೆ. ಮಳೆಗಾಲಕ್ಕೂ ಮುನ್ನ ರಸ್ತೆಯ ಗುಂಡಿ ಮುಚ್ಚದಿರುವ ಕಾರಣ ಗುಂಡಿಗಳು ದೊಡ್ಡದಾಗುತ್ತಾ ಹೋಗುತ್ತಿವೆ. ಹಳ್ಳವನ್ನು ತಪ್ಪಿಸಲು ರಾಂಗ್ ಸೈಡ್‌ಗೆ ಹೋಗುವುದು, ಹೊಸದಾಗಿ ಸಂಚರಿಸುವವರು ಗುಂಡಿ ಬಂದ ತಕ್ಷಣ ವಾಹನದ ವೇಗ ಕಡಿಮೆ ಮಾಡುವುದರಿಂದ ಅಪಘಾತಗಳು ನಡೆಯುತ್ತಿದೆ. ಆದ್ದರಿಂದ ಮಳೆಗಾಲಕ್ಕೂ ಮೊದಲೇ ರಸ್ತೆ ಮತ್ತು ರಸ್ತೆ ಬದಿಯ ಚರಂಡಿಗಳನ್ನು ಸರಿಪಡಿಸಿದರೆ ಅಪಘಾತಗಳ ಸಂಖ್ಯೆ ಕಡಿಮೆಯಾಗಬಹುದು.
ಬಿ.ವಿ. ಕೌಶಿಕ್, ವಿರಾಜಪೇಟೆ
ಕೊಡಗು ಪ್ರವಾಸಿ ಸ್ಥಳವಾಗಿರುವುದರಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ರಾಜ್ಯ ಹೆದ್ದಾರಿಗಳು ಅಗಲೀಕರಣಗೊಂಡಿಲ್ಲ. ಬಹುತೇಕ ಕಡೆ ಗುಂಡಿ ಬಿದ್ದಿದೆ. ಗ್ರಾಮೀಣ ಭಾಗದಲ್ಲಿರುವ ಹೆದ್ದಾರಿಗಳು ಅಗಲ ಇಲ್ಲ. ರಸ್ತೆ ಸಮಸ್ಯೆಗಳೇ ಅಪಘಾತಕ್ಕೆ ಕಾರಣವಾಗುತ್ತಿದೆ. ರಸ್ತೆ ಕಾಮಗಾರಿಗೆ ವಿಶೇಷ ಪ್ಯಾಕೇಜ್ ಬೇಕಾಗಿದೆ.
ಸಿ.ಎಸ್. ಪೊನ್ನಪ್ಪ, ಕಾಫಿ ಬೆಳೆಗಾರ, ಚನ್ನಾಪುರ ಗ್ರಾಮ
ಅತಿಯಾದ ವೇಗ ಅಪಘಾತಕ್ಕೆ ಕಾರಣವಾಗುತ್ತಿದೆ. ಕೊಡಗಿನ ಬಹುತೇಕ ರಾಜ್ಯ ಹೆದ್ದಾರಿಗಳು ಅಗಲವಾಗಿಲ್ಲ. ರಸ್ತೆಗಳು ಅಲ್ಲಲ್ಲಿ ಗುಂಡಿ ಬಿದ್ದಿವೆ. ದ್ವಿಚಕ್ರ ವಾಹನಗಳ ಹೆಚ್ಚಿನ ಸವಾರರು ರಸ್ತೆ ನಿಯಮಗಳನ್ನು ಪಾಲಿಸುತ್ತಿಲ್ಲ. ಹೆಲ್ಮೆಟ್ ಧರಿಸದ ಯುವಕರೇ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ರಸ್ತೆ ಸುರಕ್ಷಾ ನಿಯಮ ಕಡ್ಡಾಯವಾಗಿ ಪಾಲಿಸಲೇಬೇಕು. ಯುವಕರಲ್ಲಿ ಜಾಗೃತಿ ಮೂಡಿಸಬೇಕು.
ಅಶ್ವಿನಿ ಕೃಷ್ಣಕಾಂತ್, ಗೃಹಿಣಿ, ಸಿಂಗನಳ್ಳಿ ಗ್ರಾಮ
ಕೊಡಗಿನಲ್ಲಿ ರಸ್ತೆ ಅಪಘಾತದಿಂದ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದುರ್ಮರಣ ಹೊಂದುತ್ತಿರುವುದು ದುರಂತ. ಅತಿಯಾದ ವೇಗದಲ್ಲಿ ವಾಹನ ಚಾಲನೆ ಇದಕ್ಕೆ ಮುಖ್ಯ ಕಾರಣವಾಗಿದೆ. ಅತಿಯಾದ ವೇಗದಲ್ಲಿ ವಾಹನ ಚಾಲನೆ ಮಾಡದಂತೆ ಜಾಗೃತಿ ಮೂಡಿಸಬೇಕು. ರಸ್ತೆ ಸರಿ ಇಲ್ಲ ಎನ್ನುವುದು ಸರಿಯಲ್ಲ. ಇತ್ತೀಚಿಗೆ ರಸ್ತೆ ಅಭಿವೃದ್ಧಿ ಹೊಂದುತ್ತಿದೆ.
ಅಬ್ಬಾಸ್, ಮಾಜಿ ಅಧ್ಯಕ್ಷ, ಗ್ರಾಮ ಪಂಚಾಯತ್, ದುಂಡಳ್ಳಿ
ಕೊಡಗಿನ ರಸ್ತೆ ಅಪಘಾತದಲ್ಲಿ ಯುವ ಸಮೂಹ ದುರ್ಮರಣದಲ್ಲಿ ಹೊಂದುತ್ತಿದ್ದಾರೆ. ಅತಿಯಾದ ವೇಗದಲ್ಲಿ ವಾಹನ ಚಾಲನೆ, ದ್ವಿಚಕ್ರ ವಾಹನದಲ್ಲಿ ಬಿದ್ದು ಸಾವು ಸಂಭವಿಸುತ್ತಿದೆ. ಪೊಲೀಸ್ ಇಲಾಖೆ ಅತಿಯಾದ ವೇಗದಲ್ಲಿ ವಾಹನ ಚಾಲನೆ ಮಾಡುವವರ ಮೇಲೆ ಕ್ರಮ ಕೈಗೊಳ್ಳುತ್ತಿದ್ದಾರೆ. ಆದರೂ ಜಾಗೃತರಾಗದಿರುವುದು ದುರಂತ. ಮುಂದಿನ ದಿನದಲ್ಲಿ ಯುವ ಸಮೂಹಕ್ಕೆ ಅತಿಯಾಗಿ ವಾಹನ ಚಾಲನೆ ಮಾಡದಂತೆ ಜಾಗೃತಿ ಕಾರ್ಯಕ್ರಮ ಆಯೋಜನೆ ಮಾಡಬೇಕು. ರಸ್ತೆಗಳು ಇತ್ತೀಚಿಗೆ ಅಭಿವೃದ್ಧಿ ಹೊಂದುತ್ತಿದೆ.
ಗೀತಾ ಹರೀಶ್, ಅಧ್ಯಕ್ಷೆ, ಗ್ರಾಮ ಪಂಚಾಯತ್, ಶನಿವಾರಸಂತೆ
ರಾಷ್ಟಿçÃಯ ಹೆದ್ದಾರಿ 275ರ ಕುಶಾಲನಗರದಿಂದ ಸಂಪಾಜೆಯವರೆಗೆ ರಸ್ತೆ ಸಂಪೂರ್ಣ ತಿರುವುಗಳಿಂದ ಕೂಡಿದೆ. ದಿನದಿಂದ ದಿನಕ್ಕೆ ಜಿಲ್ಲೆಗೆ ಆಗಮಿಸುವಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಕೊಡಗಿನ ರಸ್ತೆಯ ಮಾಹಿತಿ ಕೊರತೆ ಹಾಗೂ ಕೊಡಗಿನಲ್ಲಿ ಕೆಲವು ತಿರುವು ರಸ್ತೆಗಳಲ್ಲಿ ಅಪಾಯದ ಸೂಚನೆಗಳು ಇಲ್ಲದಿರುವುದು, ವಾಹನಗಳ ಚಾಲಕರು ಅತೀ ವೇಗವಾಗಿ ಸಂಚರಿಸುತ್ತಿರುವುದರಿAದ ಅಪಘಾತಗಳು ಸಂಭವಿಸುವುದರೊAದಿಗೆ ಸಾಕಷ್ಟು ಸಾವು ನೋವುಗಳು ಉಂಟಾಗುತ್ತಿದೆ. ಅಪಘಾತ ಪ್ರಮಾಣ ನಿಯಂತ್ರಿಸಲು ಸಂಬAಧಿಸಿದ ಜನಪ್ರತಿನಿಧಿಗಳು ಹಾಗೂ ಇಲಾಖೆಯ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕು. ಹೆಚ್ಚು ಅಪಘಾತ ಸಂಭವಿಸಿರುವ ಸ್ಥಳಗಳಲ್ಲಿ ಎಚ್ಚರಿಕೆಯ ಸೂಚನಾ ಫಲಕಗಳನ್ನು ಅಳವಡಿಸಬೇಕು.
ಪಿ.ಆರ್. ಸುನಿಲ್ ಕುಮಾರ್, ಅಧ್ಯಕ್ಷ, ಗ್ರಾ.ಪಂ., ಸುಂಟಿಕೊಪ್ಪ
ಹೆಚ್ಚುತ್ತಿರುವ ಅಪಘಾತಗಳ ಪ್ರಮಾಣ ತಗ್ಗಿಸಲು ಮತ್ತು ಪ್ರಾಣಹಾನಿ ತಪ್ಪಿಸಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ರಸ್ತೆ ತಿರುವುಗಳಲ್ಲಿ ಅಭಿವೃದ್ಧಿ, ಅಗಲೀಕರಣ, ಸೂಚನಾ ಫಲಕಗಳ ಅಳವಡಿಕೆ, ಕ್ರಾö್ಯಷ್ ಬ್ಯಾರಿಯರ್ಸ್, ಸೋಲಾರ್ ಬ್ಲಿಂಕರ್ಸ್, ಗ್ರೇಡ್ ಸಪರೇಟರ್ಸ್, ಜಂಕ್ಷನ್‌ಗಳ ಅಭಿವೃದ್ಧಿ-ಅಗಲೀಕರಣ, ಅಂಡರ್‌ಪಾಸ್ ಮತ್ತು ಓವರ್‌ಪಾಸ್ ನಿರ್ಮಾಣ ಹಾಗೂ ಇತರೆ ರಸ್ತೆ ಸುರಕ್ಷತೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಅಪಘಾತ ಪ್ರಮಾಣ ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತಿದೆ.
ಸತೀಶ್ ಜಾರಕಿಹೊಳಿ, ಲೋಕೋಪಯೋಗಿ ಸಚಿವ