ಜಿಲ್ಲೆ

ಕೇಪುಳು ಬಳಿ ಕಾರು- ರಿಕ್ಷಾ ಡಿಕ್ಕಿ

Mangaluru - Nishantha Narayana

ಪುತ್ತೂರು: ಉಪ್ಪಿನಂಗಡಿ- ಪುತ್ತೂರು ಚತುಷ್ಪಥ ರಸ್ತೆಯ ಆನೆಮಜಲು ದುರಸ್ತಿ ಕಾಮಗಾರಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಫಲಕ ಅಳವಡಿಸದೆ ಕೇಪುಳು ಸಮೀಪ ಕಾರು ಹಾಗೂ ರಿಕ್ಷಾ ಡಿಕ್ಕಿಯಾಗಿದೆ.

ರಿಕ್ಷಾದಲ್ಲಿದ್ದ ಇಬ್ಬರು ಇಬ್ಬರೂ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದ ರಿಕ್ಷಾದ ಮುಂಭಾಗ ಹಾಗೂ ಗಾಜಿಗೆ ಹಾನಿಯಾಗಿದೆ. ಕಾರು ಜಖಂಗೊಂಡಿದೆ. ಕೆಲವು ಸಮಯ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ. ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

*ರಾತ್ರಿಗೆ ಅಪಾಯ:

ಕಾಮಗಾರಿ ನಡೆಯುವ ಸ್ಥಳದ ಮೊದಲು ಚತುಷ್ಪಥವನ್ನು ಒಂದು ಭಾಗದಲ್ಲಿ ಬ್ಯಾರಿಕೇಡ್ ಹಾಕಿ ಮುಚ್ಚಲಾಗಿದೆ. ಹಾಗೆಂದು ಇನ್ನೊಂದು ಬದಿಯಲ್ಲಿ ಸೂಚನೆಗಳನ್ನು ಅಳವಡಿಸಿಲ್ಲ. ರಾತ್ರಿ ವಾಹನ ಸವಾರರಿಗೆ ಲೈಟ್ ಬೆಳಕಿನಲ್ಲಿ ಎಚ್ಚರಿಕೆ ಮಾಹಿತಿ ನೀಡುವ ಯಾವ ಫಲಕವನ್ನೂ ಅಳವಡಿಸಿಲ್ಲ. ಇದರಿಂದ ತಿರುವುಗಳಲ್ಲಿ ಏಕಮುಖ ರಸ್ತೆಯಲ್ಲಿ ದ್ವಿಮುಖ ಸಂಚಾರ ಮಾಡಿರುವುದು ತಿಳಿಯದೆ ಅಪಘಾತ ಆಗುವ ಸಾಧ್ಯತೆಯಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.