ಬಂಟ್ವಾಳ: ಮಣ್ಣು ಹೇರಿಕೊಂಡು ಹೋಗುತ್ತಿದ್ದ ಲಾರಿಯೊಂದು ರಿಕ್ಷಾ ನಿಲ್ದಾಣವೊಂದಕ್ಕೆ ಡಿಕ್ಕಿ ಹೊಡೆದು ಬಳಿಕ ರಿಕ್ಷಾಕ್ಕೆ ಗುದ್ದಿದ ಘಟನೆ ಬಡಕಬೈಲು ಎಂಬಲ್ಲಿ ನಡೆದಿದೆ.
ಗುರುಪುರ ಕೈಕಂಬ ಕಡೆಯಿಂದ ಬಿ.ಸಿ.ರೋಡು ಕಡೆಗೆ ಬರುತ್ತಿದ್ದ ಲಾರಿ, ಚಾಲಕನ ನಿಯಂತ್ರಣ ಕಳೆದುಕೊಂಡು ರಿಕ್ಷಾ ನಿಲ್ಣಾಣಕ್ಕೆ ಡಿಕ್ಕಿಯಾಗಿದೆ. ಅದೃಷ್ಟವಶಾತ್ ನಿಲ್ದಾಣದಲ್ಲಿ ರಿಕ್ಷಾದಲ್ಲಿದ್ದ ಚಾಲಕ ಹೊರಗಡೆಯಿದ್ದುದರಿಂದ ಚಾಲಕನಿಗೆ ಗಾಯವಾಗಿಲ್ಲ. ರಿಕ್ಷಾ ಹಾಗೂ ನಿಲ್ದಾಣ ಸಂಪೂರ್ಣ ಜಖಂಗೊಂಡಿದೆ. ಘಟನೆ ಬಳಿಕ ಲಾರಿ ರಸ್ತೆ ಬದಿಗೆ ವಾಲಿ ನಿಂತಿದೆ.