ಜಿಲ್ಲೆ

ಮುರಿದು ಬಿದ್ದ ಮಾವಿನ ಮರ - ಮಾವಿನ ಕಾಯಿಗೆ ಮುಗಿ ಬಿದ್ದ ಜನ

ಪುತ್ತೂರು: ಬೊಳುವಾರಿನ ಹರಿಪ್ರಸಾದ್ ಹೋಟೆಲ್ ಮುಂಭಾಗದಲ್ಲಿದ್ದ ಹಳೆಯ ಮಾವಿನ ಮರವೊಂದು ಮುರಿದು ಬಿದ್ದು, ಎರಡು ವಾಹನ ಜಖಂಗೊಂಡಿದೆ.

ಬೊಳುವಾರು ಬಸ್ ಪ್ರಯಾಣಿಕರ ತಂಗುದಾಣದ ಪಕ್ಕದಲ್ಲಿದ್ದ ಮರ ಶನಿವಾರ ಸಾಯಂಕಾಲ ಏಕಾಏಕಿ ಮುರಿದು ಬಿದ್ದಿದೆ. ಹೋಟೇಲ್ ಹಾಗೂ ಅಕ್ಕಪಕ್ಕದ ಅಂಗಡಿಗೆ ಆಗಮಿಸುವ ವಾಹನಗಳು ಇಲ್ಲೇ ವಾಹನ ನಿಲುಗಡೆ ಮಾಡುತ್ತಿದ್ದು, ಒಂದು ಟೆಂಪೋ ಹಾಗೂ ದ್ವಿಚಕ್ರವಾಹನ ಹಾನಿಯಾಗಿದೆ.

ಮಾವಿನ ಮರದಲ್ಲಿ ಕಾಯಿ ಹೆಚ್ಚಾಗಿದ್ದ ಕಾರಣದಿಂದ ಮರ ಬೀಳುತ್ತಿದ್ದಂತೆ ಜನರು ಮಾವಿನ ಕಾಯಿಗಾಗಿ ಮುಗಿ ಬಿದ್ದಿದ್ದಾರೆ. ತೆರವು ಕಾರ್ಯಾಚರಣೆ ನಡೆಯುತ್ತಿದೆ.