ಜಿಲ್ಲೆ

ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ

ಜಿ.ಹೆಚ್. ಧನ್ಯಕುಮಾರ್

ಚೌಳಹಿರಿಯೂರು: ಕ್ರೀಡೆಯಲ್ಲಿ ಸೋಲು-ಗೆಲವು ಮುಖ್ಯವಲ್ಲ ಸ್ಪರ್ಧೆ ಮುಖ್ಯ. ಸೋಲು-ಗೆಲವು ಕ್ರೀಡೆಯ ಒಂದೇ ನಾಣ್ಯದ ಎರಡು ಮುಖಗಳು ಎಂದು ಬಿಇಒ ತಿಮ್ಮಯ್ಯ ಹೇಳಿದರು.

ಸಮೀಪ ಕಾಮನಕೆರೆ ಮುರಾರ್ಜಿ ಶಾಲಾ ಆವರಣದಲ್ಲಿ ಹಿರೇನಲ್ಲೂರು ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲಾ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಕ್ರೀಡಾಪಟುಗಳು ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸುವಂತೆ ಕ್ರೀಡಾ ಪಟುಗಳಿಗೆ ಸಲಹೆ ನೀಡಿದರು.

ಟಿಪಿಒ ನಾಗರಾಜ್ ಮಾತನಾಡಿ ಓದಿಗೆ-ಏಕಾಗ್ರತೆ ಮೂಡಲು ಕ್ರೀಡೆ ಸಹಕಾರವಾಗಲಿದೆ. ದೇಹ ಸಧೃಡವಾಗಿರಲು ಮತ್ತು ಮಾನಸಿಕ ಬೆಳವಣಿಗೆ ಕ್ರೀಡೆ ಸಹಕಾರಿಯಾಗಲಿದೆ ಎಂದರು. ಗ್ರಾಪಂ ಅಧ್ಯಕ್ಷ ಶೇಖರಪ್ಪ ಮಾತನಾಡಿ, ಇಂತಹ ಕ್ರೀಡಾಕೂಟ ನಡೆಸಲು ಸಾಕಷ್ಟು ಹಣ ಖರ್ಚಾಗುತ್ತದೆ ಇಲಾಖೆ ಹಣ ಸಾಕಾಗದ ಸಂದರ್ಭದಲ್ಲಿ ಕೈ ಹಿಡಿಯುವವರೇ ಕೊಡುಗೈ ದಾನಿಗಳು ಅಂತಃ ಧಾನೊಇಗಳಿಂದ ಕ್ರೀಡಾ ಕೂಟ ಯಶಸ್ವಿಯಾಗಿ ಜರುಗಲಿದೆ ಎಂದ ಧಾನಿಗಳಿಗೆ ಅಭಿನಂದಿಸಿದರು.

ಗ್ರಾಪಂ ಸದಸ್ಯ ಷಡಾಕ್ಷರಿ, ಶಿಕ್ಷಕಿ ಜ್ಯೋತಿ, ಯಲ್ಲಪ್ಪ, ಸಂತೋಷ್ ಕುಮಾರ್, ವೈ.ಎಮ್.ಅಭಿಷೇಕ್, ಗೋಪಿನಾಥ್, ಜಗದೀಶ್, ರಾಜಪ್ಪ ಮತ್ತಿತರರು ಉಪಸ್ಥಿತರಿದ್ದರು.