ತಲೇಖಾನ್ ಗ್ರಾಮದಲ್ಲಿ ವಲಯ ಮಟ್ಟದ ಕ್ರೀಡಾಕೂಟವನ್ನು ಗ್ರಾಪಂ ಅಧ್ಯಕ್ಷೆ ಉಮ್ಮವ್ವ ಗ್ಯಾನಪ್ಪ ರಾಠೋಡ ಉದ್ಘಾಟಿಸಿದರು. ಪ್ರಮುಖರಾದ ಸತೀಶಗೌಡ ತುರ್ವಿಹಾಳ, ಕನಕಪ್ಪ ಗುಡಿಹಾಳ, ವೀರೇಶ, ವೀರನಗೌಡ, ಹನುಮಂತಪ್ಪ ಇತರರಿದ್ದರು. 
ಜಿಲ್ಲೆ

ಸೋಲು-ಗೆಲುವು ಸಮನಾಗಿ ಸ್ವೀಕರಿಸಿ

ಗಾಯತ್ರಿ ಮಾಲಿಪಾಟೀಲ್

ಮುದಗಲ್: ಮಕ್ಕಳು ಶಿಕ್ಷಣದ ಜತೆ ಕ್ರೀಡಾ ಕ್ಷೇತ್ರದಲ್ಲಿಯೂ ಸಾಧನೆ ಮಾಡಬೇಕು. ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಬೇಕು ಎಂದು ಕಾಂಗ್ರೆಸ್ ಪ್ರಮುಖ ಸತೀಶಗೌಡ ತುರ್ವಿಹಾಳ ಹೇಳಿದರು.

ಸಮೀಪದ ತಲೇಖಾನ್ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಮಾತನಾಡಿದರು. ದೈಹಿಕ ಮತ್ತು ಮಾನಸಿಕ ಬೆಳವಣಿಗೆ, ಉತ್ತಮ ಆರೋಗ್ಯಕ್ಕೆ ಕ್ರೀಡೆಗಳು ಪೂರಕವಾಗಿವೆ. ನಿರ್ಣಾಯಕರ ತೀರ್ಪನ್ನು ಗೌರವಿಸಬೇಕು. ಸ್ಪರ್ಧಾ ಮನೋಭಾವದಿಂದ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದರು. ತಾಲೂಕು ಗ್ಯಾರಂಟಿ ಸಮಿತಿ ಸದಸ್ಯ ಕನಕಪ್ಪ ಗುಡಿಹಾಳ, ಗ್ರಾಪಂ ಅಧ್ಯಕ್ಷೆ ಉಮ್ಮವ್ವ ಗ್ಯಾನಪ್ಪ ರಾಠೋಡ, ಮುಖ್ಯಶಿಕ್ಷಕರಾದ ಮಲ್ಲಪ್ಪ , ಬಿ.ಮೂಲಿಮನಿ ಇತರರಿದ್ದರು.