ಮಂಗಳೂರು : ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್(ಐ ) ಮಂಗಳೂರು ಇದರ ವತಿಯಿಂದ
ಇಂಜಿನಿಯರ್ಸ್ ದಿನಾಚರಣೆ ಅಂಗವಾಗಿ ನಗರ ಕೆಪಿಟಿ ವೃತದ ಬಳಿ ಇರುವ ವಿಶ್ವೇಶ್ವರಯ್ಯ ರಸ್ತೆಯ ನಾಮಫಲಕ ಹಾಗೂ
ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು. ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು
ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ಎಸಿಸಿಇ ರಾಷ್ಟ್ರೀಯ ಘಟಕದ ಮಹಾ ಕಾರ್ಯದರ್ಶಿ ರಾಜೇಂದ್ರ ಕಲ್ಬಾವಿ, ಮಾಜಿ ಮಹಾ ಕಾರ್ಯದರ್ಶಿ ವಿಜಯ ವಿಷ್ಣು ಮಯ್ಯ,ಎಸಿಸಿಇ ಮಂಗಳೂರು ಘಟಕದ ಅಧ್ಯಕ್ಷ ಉಜ್ವಲ್ ಡಿಸೋಜಾ, ಕಾರ್ಯದರ್ಶಿ ವಿನೋದ್ ಡಿಸೋಜಾ, ಉಪಾಧ್ಯಕ್ಷ ದೇವದಾಸ್ ಕಾಮತ್, ಖಜಾಂಜಿ ಏಕನಾಥ ದಂಡಕೇರಿ, ಕಾರ್ಯಕಾರಿಣಿ ಸದಸ್ಯರಾದ ಡಾ.ಚಿನ್ನಗಿರಿ ಗೌಡ, ಸಂದೀಪ್ ರಾವ್, ಜಗದೀಪ್‌ಶೆಟ್ಟಿ, ಮಾಜಿ ಅಧ್ಯಕ್ಷರಾದ ವಿನಾಯಕ ಪೈ, ಅನಿಲ್ ಡಿಸೋಜಾ, ಅರುಣ್ ಪ್ರಭ, ಸತ್ಯರಂಜನ ರಾವ್, ಮಂಗಳೂರು ಲೋಕೋಪಯೋಗಿ ವೃತದ ಅಧೀಕ್ಷಕ ಅಭಿಯಂತರ ಗೋಕುಲದಾಸ್, ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್
ವಿಭಾಗದ ಮುಖ್ಯಸ್ಥ ದೀಪಕ್, ಅರುಣ್‌ರಾಜ್,ಭರತ್, ವಿಮಲ್ಕೀರ್ತಿ ಜೈನ್, ಸುಬ್ರಮಣ್ಯ ಪ್ರಭು ಮುರಳೀಧರ್, ಪ್ರಜ್ವಲ್, ಪ್ರಕಾಶಚಂದ್ರ ಶೆಟ್ಟಿ, ಮಹಮ್ಮದ್‌ಅಯೂಬ್, ಸೂರಜ್‌ಶೆಟ್ಟಿ, ವಿಕ್ರಂ ಶೆಟ್ಟಿಉಪಸ್ಥಿತರಿದ್ದರು.