ಜಿಲ್ಲೆ

ಬೆಳ್ಳಂಬೆಳಗ್ಗೆಯೇ ಎಸಿಬಿ ದಾಳಿ: ರಾಯಚೂರು ನಗರಾಭಿವೃದ್ಧಿ ಯೋಜನಾ ಕೋಶದ ಇಇಗೆ ಶಾಕ್​!

vinaymk1969

ರಾಯಚೂರು : ನಗರಾಭಿವೃದ್ದಿ ಯೋಜನಾ ಕೋಶದ ಇಇ ಮಲ್ಲಿಕಾರ್ಜುನ ಗೋಪಶೆಟ್ಟಿ ಮನೆಯ ಮೇಲೆ ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳ ದಾಳಿ ನಡೆಸಿದ್ದಾರೆ. ನಗರದ ಐಡಿಎಸ್ಎಂಟಿ ಬಡಾವಣೆಯಲ್ಲಿರುವ ಮನೆಗೆ ದಾಳಿ ನಡೆಸಿರುವ ಅಧಿಕಾರಿಗಳು ಗೋಪಶೆಟ್ಟಿ ಕುಟುಂಬವನ್ನು ಆಘಾತಕ್ಕೆ ಕೆಡವಿದ್ದಾರೆ.

ಎಸಿಬಿ ಡಿಎಸ್ಪಿ ಸಂತೋಷ ಬನಹಟ್ಟಿ ನೇತೃತ್ವದಲ್ಲಿ ಇಇ ಗೋಪಶೆಟ್ಟಿ ಅವರ‌ ನಿವಾಸ, ಕಚೇರಿ, ಪೆಟ್ರೋಲ್ ಬಂಕ್, ಸಹಭಾಗಿತ್ವದ ಟ್ರ್ಯಾಕ್ಟರ್ ಶೋ ರೂಂ ಮೇಲೂ ದಾಳಿ ನಡೆದಿದ್ದು, ಎಲ್ಲ ಕಡೆಗಳಲ್ಲೂ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.

ಬಳ್ಳಾರಿ, ವಿಜಯಪುರ, ಕೊಪ್ಪಳ, ಧಾರವಾಡದ ಎಸಿಬಿಯ ನಾಲ್ಕು ತಂಡದಲ್ಲಿ ಅಧಿಕಾರಿಗಳಿದ್ದಾರೆ. ಅಕ್ರಮ‌ ಆಸ್ತಿ ಸಂಪಾದನೆ ದೂರು ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.