ಆಲೂರು: ತಾಲೂಕಿನ ಜೆ.ತಿಮ್ಮನಹಳ್ಳಿ ಗ್ರಾಮದ ರೈತರೊಬ್ಬರು ಎರಡು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಅಡಕೆ ಗಿಡ, ನೀರಿನ ಪೈಪ್‌ಗೆ ಮಂಗಳವಾರ ಬೆಂಕಿ ತಗುಲಿ ಸುಟ್ಟುಹೋಗಿವೆ.
ಗ್ರಾಮದ ನಿವಾಸಿ ನಿಂಗಯ್ಯ ಅವರ 35ಕ್ಕೂ ಹೆಚ್ಚು ಅಡಕೆ ಗಿಡ, ಹನಿ ನೀರಾವರಿ ನೀರಿನ ಪೈಪ್ ಬೆಂಕಿಗಾಹುತಿಯಾಗಿದೆ. ಪಕ್ಕದ ಜಮೀನಿನ ರೈತ ಮೊದಲು ಬೆಂಕಿ ನೋಡಿದ್ದು, ತಕ್ಷಣ ಮಾಲೀಕರಿಗೆ ತಿಳಿಸಿದ್ದಾರೆ. ಬಳಿಕ ಹಲವರು ಸ್ಥಳಕ್ಕೆ ಬಂದು ಬೋರ್‌ವೆಲ್ ನೀರಿನ ಸಹಾಯದಿಂದ ಬೆಂಕಿ ನಂದಿಸಿದ್ದಾರೆ. ಜಮೀನಿನ ಪಕ್ಕದಲ್ಲಿದ್ದ ಕಸಕ್ಕೆ ಯಾರೋ ಬೆಂಕಿ ಹಚ್ಚಿದ್ದು, ಅದು ಇಡೀ ಜಮೀನನ್ನು ಆವರಿಸಿಕೊಂಡಿದೆ ಎನ್ನಲಾಗಿದೆ.
ಬೆಂಕಿಗೆ ಆಹುತಿಯಾದ ಅಡಕೆ ಗಿಡ 3 ವರ್ಷದ ಬೆಳೆಯಾಗಿದೆ.