ಜಿಲ್ಲೆ

ಮಳೆಹಾನಿ ಪ್ರದೇಶಕ್ಕೆ ಉಪ ವಿಭಾಗಾಧಿಕಾರಿ ಭೇಟಿ

ಸುನಿಲ್ ಪೊನ್ನೇಟಿ

ಮಡಿಕೇರಿ:

ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ ಗುರುವಾರ ಜಿಲ್ಲೆಯ ಭಾಗಮಂಡಲ ಹೋಬಳಿಯಲ್ಲಿ ವಿವಿಧ ಮಳೆಹಾನಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಭಾಗಮಂಡಲ ಹೋಬಳಿಯ ಪ್ರವಾಹ ಬರುವ ಬೆಂಗೂರು ಗ್ರಾಮದ ದೋಣಿ ಕಾಡು ಪ್ರದೇಶ ಮತ್ತು ಭಾಗಮಂಡಲದ ತ್ರಿವೇಣಿ ಸಂಗಮವನ್ನು ಪರಿಶೀಲಿಸಿದರು. ಪದಕಲ್ಲು ಗ್ರಾಮದಲ್ಲಿ ಹಾನಿಗೊಳಗಾಗಿರುವ ಭಾಸ್ಕರ್ ಎಂಬವರ ಮನೆಯನ್ನು ವೀಕ್ಷಿಸಿದರು.

ಮಳೆಗಾಲದಲ್ಲಿ ಮುಂಜಾಗ್ರತಾÀ ಕ್ರಮವಾಗಿ ಕಾಳಜಿ ಕೇಂದ್ರಕ್ಕೆ ಕಾಯ್ದಿರಿಸಿದ ಚೇರಂಬಾಣೆ ಗ್ರಾಮದ ಬಾಲಕರ ಭವನ, ಭಾಗಮಂಡಲ ಗ್ರಾಮದ ಐಟಿಐ ಕಾಲೇಜು ಹಾಗೂ ಭಾಗಮಂಡಲ ಗ್ರಾಮದ ಕಾಶಿ ಮಠದಲ್ಲಿನ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿದರು. ಈ ಸಂದರ್ಭ ಭಾಗಮಂಡಲ ಹೋಬಳಿ ಕಂದಾಯ ಪರಿಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಗ್ರಾಮ ಸಹಾಯಕರು ಇದ್ದರು.