ಜಿಲ್ಲೆ

ಜೋಗಿಮನೆ ತೋಟದಲ್ಲಿ ಕಲ್ಲು ಬಂಡೆ ಉರುಳಿ ಬಿದ್ದ ಸ್ಥಳ ಪರಿಶೀಲಿಸಿದ ಎಸಿ

ಯಲ್ಲಾಪುರ: ತಾಲೂಕಿನ ಕೊಡ್ಲಗದ್ದೆಯ ವಿಶ್ವೇಶ್ವರ ಗಾಂವಕರ ಜೋಗಿಮನೆ ತೋಟದಲ್ಲಿ ಕಲ್ಲು ಬಂಡೆ ಉರುಳಿ ಬಿದ್ದ ಸ್ಥಳಕ್ಕೆ ಕುಮಟಾ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ ಭೇಟಿ ನೀಡಿ, ಪರಿಶೀಲಿಸಿದರು. ತಹಸೀಲ್ದಾರ್ ಅನಂತ ಶಂಕರ, ಪಿಡಿಒ ನಾಗೇಂದ್ರ ನಾಯ್ಕ, ಗ್ರಾಪಂ ಸಿಬ್ಬಂದಿ ಪ್ರದೀಪ ಶೆಟ್ಟಿ, ಇತರರಿದ್ದರು.

ಗ್ರಾಪಂ ಸದಸ್ಯ ಚಂದ್ರು ನಾಯ್ಕ ಮಾತನಾಡಿ, ಬಂಡೆಯಿಂದ ಅದೃಷ್ಟವಶಾತ್ ಯಾರಿಗೂ ಪ್ರಾಣಹಾನಿ ಆಗಿಲ್ಲ. ಆದರೆ, ತೋಟದ ಜಮೀನಿಗೆ ನೀರು ಪೂರೈಸುವ ಕಾಲುವೆ ಸಂಪೂರ್ಣ ಮುಚ್ಚಿಹೋಗಿವೆ. ಇದರಿಂದ ಕೃಷಿಕರು ತೀವ್ರ ತೊಂದರೆ ಅನುಭವಿಸಬೇಕಾದ ಪರಿಸ್ಥಿತಿ ಇದೆ. ಸಂಬಂಧಪಟ್ಟ ಇಲಾಖೆ ಶೀಘ್ರ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.

ತೋಟದಲ್ಲಿ ಬಿದ್ದ ಬಂಡೆಯನ್ನು ಜಿಲ್ಲಾಡಳಿತ ತೆರವುಗೊಳಿಸಿ ಕೊಡಬೇಕು ಎಂದು ಕೃಷಿಕ ವಿಶ್ವೇಶ್ವರ ಗಾಂವಕರ್ ಒತ್ತಾಯಿಸಿದರು.