ಮುದಗಲ್‌ನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಎಸಿ ಸುಟ್ಟಿರುವುದು 
ಜಿಲ್ಲೆ

ಎಸಿಯಲ್ಲಿ ಬೆಂಕಿ: ನೇತ್ರ ಉಚಿತ ಚಿಕಿತ್ಸೆ ರದ್ದು

Kopala - Desk - Eraveni

ಮುದಗಲ್: ಸ್ಥಳೀಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಏರ್ಪಡಿಸಿದ್ದ ನೇತ್ರ ಉಚಿತ ಚಿಕಿತ್ಸೆ ಶಿಬಿರ ಅಕಸ್ಮಿಕ ಬೆಂಕಿ ಅವಘಾಡದಿಂದ ರದ್ದು ಮಾಡಲಾಯಿತು.

ನೂರಾರು ಜನರಿಗೆ ನೇತ್ರಾ ತಪಾಸಣೆ ಮಾಡಿ ಶಸ್ತ್ರ ಚಿಕಿತ್ಸೆಗೆ ವೈದ್ಯರು ಸಿದ್ದತೆ ಮಾಡಿಕೊಳ್ಳಲು ಮುಂದಾಗಿದ್ದ ವೇಳೆ, ಶಸ್ತ್ರ ಚಿಕಿತ್ಸೆ ಕೊಠಡಿಯ ಎಸಿಯಿಂದ ಬೆಂಕಿ ಕಾಣಿಸಿಕೊಂಡ ದಟ್ಟವಾದ ಹೊಗೆ ಆವರಿಸಿಕೊಂಡಿತು. ಇದರಿಂದ ಕೆಲ ಒತ್ತು ತಬ್ಬಿಬ್ಬಾದ ವೈದ್ಯರು ಚಿಕಿತ್ಸೆ ಕೊಠಡಿಯಿಂದ ಹೊರ ಹೋಡಿ ಬಂದರು.

ಅದೃಷ್ಟಾವಷತ್ ಯಾವುದೇ ಅನಾಹುತ ಸಂಭವಿಸಿಲ್ಲ. ಆದರೆ, ಎಸಿಗೆ ಅಳವಡಿಸಿದ ವಿದ್ಯುತ್ ವೈರ್ ತೆಗೆಯುವಾಗ ಅಭಿ ಎಂಬ ವೈದ್ಯರ ಕೈಗೆ ಸ್ವಲ್ಪ ಬೆಂಕಿ ತಗುಲಿದೆ ಎಂದು ತಿಳಿದಿದೆ.

ಚಿಕಿತ್ಸೆ ಮುಂದಕ್ಕೆ: ಅಕ್ಟೋಬರ್ 6ಕ್ಕೆ ನಡೆಯಬೇಕಾಗಿದ್ದ ನೇತ್ರ ಶಸ್ತ್ರ ್ರಚಿಕಿತ್ಸೆಯನ್ನು ನವಂಬರ್ 3 ಮತ್ತು 4 ತಾರೀಖು ರಂದು ನಡೆಯಲಿದೆ ಎಂದು ದಿವ್ಯ ದೃಷ್ಟಿ ಪೌಂಡೇಶನ್ ಕಾರ್ಯದರ್ಶಿ ಡಾ.ಗುರುರಾಜ ದೇಶಪಾಂಡೆ ತಿಳಿಸಿದರು.