ಜಿಲ್ಲೆ

ಎನ್​ಇಪಿ ಹಿಂಪಡೆಯದಂತೆ ಎಬಿವಿಪಿ ಪ್ರತಿಭಟನೆ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ರಾಷ್ಟ್ರೀಯ ಶಿಕ್ಷಣ ನೀತಿ(ಎನ್​ಇಪಿ) ಹಿಂಪಡೆಯಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ನಗರದ ಕಿಮ್್ಸ ಆಸ್ಪತ್ರೆ ಮಹಾದ್ವಾರದ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಕೂಗಿದ ಪ್ರತಿಭಟನಾನಿರತರು, ಯಾವುದೇ ಕಾರಣಕ್ಕೂ ಎನ್​ಇಪಿ ಹಿಂಪಡೆಯಬಾರದು ಎಂದು ಒತ್ತಾಯಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿ ವಿದ್ಯಾರ್ಥಿಗಳು ಕೌಶಲ್ಯ ಆಧಾರಿತ ಶಿಕ್ಷಣ ಪಡೆಯಬಹುದು. ನಮ್ಮ ರಾಜ್ಯ ಅಷ್ಟೇ ಅಲ್ಲದೇ ಬೇರೆ ರಾಜ್ಯದಲ್ಲಿಯೂ ಸಹ ಉದೊ್ಯೕಗ ಪಡೆಯಲು ಅನುಕೂಲವಾಗುತ್ತದೆ. ಆದರೆ, ರಾಜ್ಯ ಸರ್ಕಾರ ಚುನಾವಣೆ ಪೂರ್ವದಲ್ಲಿ ಪ್ರಣಾಳಿಕೆಯಲ್ಲಿ ಎನ್​ಇಪಿ ಬದಲಿಸುತ್ತೇವೆ ಎಂಬ ಹೇಳಿದ ಕಾರಣಕ್ಕೆ ಈಗ ಹಿಂಪೆಯಲು ಯತ್ನಿಸುತ್ತಿರುವುದು ಖಂಡನೀಯ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಪರಿಷತ್ ಹುಬ್ಬಳ್ಳಿ ನಗರ ಸಂಘಟನಾ ಕಾರ್ಯದರ್ಶಿ ಮೌನೇಶ ಗೌಡ ಮಾತನಾಡಿ, ಕರ್ನಾಟಕ ಮೊದಲ ಬಾರಿ ಎನ್​ಇಪಿ ಅನುಷ್ಠಾನ ಮಾಡಿದ ಸಾಧನೆ ಪಾತ್ರವಾಗಿತ್ತು. ಆದರೆ, ರಾಜ್ಯ ಸರ್ಕಾರ ರಾಜಕೀಯ ದುರುದ್ದೇಶದಿಂದ ಎನ್​ಇಪಿ ರದ್ದು ಪಡಿಸಲು ಮುಂದಾಗಿದೆ. ಯಾವುದೇ ಕಾರಣಕ್ಕೂ ಹಿಂಪಡೆಯಬಾರದು ಎಂದು ಆಗ್ರಹಿಸಿದರು.

ಪೊಲೀಸ್ ಅಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ನಗರ ಸಂಘಟನೆ ಸಹ ಕಾರ್ಯದರ್ಶಿ ಸಿದ್ದಾರ್ಥ ಕೋರಿ, ರಘು ಎಸ್., ಶಶಿ ಹಿರೇಮಠ ಹಾಗೂ ಇತರರು ಇದ್ದರು.