ಚಿಂತಾಮಣಿ: ಕುಟುಂಬದಲ್ಲಿನ ಕಲಹದಿಂದ ಬೇಸತ್ತ ವ್ಯಕ್ತಿಯೊಬ್ಬ ಶನಿವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಗರದ ಕೆಜಿಎನ್ ಬಡಾವಣೆಯ ಶೇಖ್ ರಹೀಂ(38) ಮೃತ.
ಮೃತನಿಗೆ ಪತ್ನಿ, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕಾರ್ ಗ್ಯಾರೇಜ್‌ನಲ್ಲಿ ಕೆಲಸಮಾಡುತ್ತಿದ್ದ ಶೇಖ್ ರಹೀಂ, 8 ವರ್ಷಗಳ ಹಿಂದೆ ನಗರದ ವೆಂಕಟಗಿರಿಕೋಟೆ ಬಡಾವಣೆಯ ಖುರ್ಷಿದ್ ಉನ್ನಿಸಾ ಹರ್ಷಿಯಾ ಅವರನ್ನು ಮದುವೆಯಾಗಿದ್ದ. ದಂಪತಿ ನಡುವೆ ಆಗಾಗ ಗಲಾಟೆ ಆಗುತ್ತಿತ್ತು. ಶನಿವಾರವೂ ಜಗಳವಾಗಿದ್ದು, ಈ ವೇಳೆ ಪತ್ನಿ ತವರು ಮನೆಯವರು ರಹೀಂ ಹಾಗೂ ಆತನ ತಂದೆ ತಾಯಿ ಮೇಲೆ ಹಲ್ಲೆ ಮಾಡಿದ್ದಾರೆಲ್ಲದೇ, ಸಾಯುವುದು ಮೇಲು, ಸತ್ತರೆ ನಾವು ಸುಖವಾಗಿ ಇರುತ್ತೇವೆ ಎಂದು ನಿಂದಿಸಿದ್ದರು ಎನ್ನಲಾಗಿದೆ. ಇದರಿಂದ ಮನನೊಂದ ಶೇಖ್ ರಹೀಂ ಮನೆಯಲ್ಲಿನ ್ಯಾನ್‌ಗೆ ನೇಣು ಬಿಗಿದುಕೊಂಡಿದ್ದಾನೆ. ತಕ್ಷಣವೇ ಆತನನ್ನು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ ಅಷ್ಟರಲ್ಲಾಗಲೇ ರಹೀಂ ಮೃತಪಟ್ಟಿದ್ದನ್ನು ವೈದ್ಯರು ಖಚಿತಪಡಿಸಿದ್ದಾರೆ. ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.