ಜಿಲ್ಲೆ

ಶತಮಾನಗಳಿಂದಲೂ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ

ಮಡಿಕೇರಿ:

ಆಧುನಿಕ ಜಗತ್ತಿನಲ್ಲಿ ಹೆಣ್ಣು ಮಕ್ಕಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಗಳು ಮುಂದುವರೆಯುತ್ತಿರುವ ಭಾರತದಂಥ ಪ್ರಜಾಪ್ರಭುತ್ವ ರಾಷ್ಟçಕ್ಕೆ ಶೋಭೆಯಲ್ಲ ಎಂದು ವಿಶ್ರಾಂತ ಪ್ರಾಂಶುಪಾಲೆ ಡಾ. ಬಿ.ಆರ್.ಶಾಂತಲಕ್ಷಿö್ಮÃ ವಿಷಾದಿಸಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಕುಶಾಲನಗರದ ನಾಗೇಗೌಡ ಬಡಾವಣೆಯ ಕಾವೇರಿ ಸ್ವ ಸಹಾಯ ಸಂಘದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ವಚನಗರ್ತಿ ಅಕ್ಕಮಹಾದೇವಿ ಚಿಂತನಾ ಗೋಷ್ಠಿಯಲ್ಲಿ ಮಾತನಾಡಿದರು.

ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಮೇಲೆ ಶತಮಾನಗಳಿಂದಲೂ ನಡೆದುಕೊಂಡು ಬರುತ್ತಿರುವ ದೌರ್ಜನ್ಯಕ್ಕೆ ಹನ್ನೆರಡನೇ ಶತಮಾನದಲ್ಲಿ ಅಕ್ಕಮಹಾದೇವಿಯೇ ಶ್ರೇಷ್ಟ ನಿದರ್ಶನ. ಅಕ್ಕಮಹಾದೇವಿ ಬಾಲ್ಯದಿಂದಲೇ ಶಿವಗುಣಗಳನ್ನು ಮೈಗೂಡಿಸಿಕೊಂಡು ಚನ್ನಮಲ್ಲಿಕಾರ್ಜುನನ್ನು ದೈವವಾಗಿಸಿ ಮಾನಸ ಪೂಜೆಯಲ್ಲಿ ನಿರತರಾಗಿದ್ದಾಗ ಕೌಶಿಕ ಮಹಾರಾಜನು ಅಕ್ಕನ ಸೌಂದರ್ಯಕ್ಕೆ ಮನಸೋತು ಅಕ್ಕನ ಮೈಮೇಲಿನ ವಸ್ತ್ರಗಳಿಗೆ ಕೈ ಹಾಕಿದ ಕಾರಣಕ್ಕೆ ವೈರಾಗ್ಯಮತಿಯಾದ ಅಕ್ಕಾ ವಿರ್ವಸ್ತ್ರಳಾಗಿ ಮನೆ ತೊರೆಯುತ್ತಾಳೆ. ಬಳಿಕ ಅಕ್ಕನ ಮನದೈವ ಚನ್ನಮಲ್ಲಿಕಾರ್ಜುನನ ಅನುಗ್ರಹದಿಂದ ಪವಾಡವೆಂಬAತೆ ಅಕ್ಕನ ತಲೆಯಕೂದಲು ದೇಹವನ್ನು ಆವರಿಸುತ್ತದೆ. ಕೊನೆಗೆ ಅಕ್ಕ ಮಹಾದೇವಿ ಅನುಭವ ಮಂಟಪಕ್ಕೆ ಬಂದಾಗ ಬಸವೇಶ್ವರರು ಅಕ್ಕಾ ಎಂದು ಕರೆದರೆ, ಅಲ್ಲಮಪ್ರಭುಗಳು ವೀರವೈರಾಗಿಣಿ ಎಂದು ಕರೆಯುತ್ತಾರೆ. ಅಂಥ ಅಕ್ಕ ಮಹಾದೇವಿ ರಚಿಸಿರುವ 400 ಕ್ಕೂ ಹೆಚ್ಚಿನ ವಚನಗಳು ಮನುಕುಲದ ದೀವಿಗೆಗಳಾಗಿವೆ ಎಂದರು.

ಅತಿಥಿಯಾಗಿದ್ದ ನಿವೃತ್ತ ಶಿಕ್ಷಕಿ ಪೊನ್ನಚ್ಚನ ಲತಾ ಅಪ್ಪಣ್ಣ ಮತ್ತು ಮುಕ್ಕಾಟಿ ಧರಣಿ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿ ಶರಣರು ಸಾರಿ ಹೋಗಿರುವ ವಚನಗಳ ಸಂದೇಶಗಳನ್ನು ಶಾಲಾ ಮಕ್ಕಳಿಗೆ ವಿವರಿಸಿ ಕಲಿಸಿದಲ್ಲಿ ಮಾತ್ರ ಸಂಸ್ಕಾರವAತ ಸಮಾಜ ಹಾಗೂ ಶರಣರು ಬಯಸಿದ ಆರ್ಶ ಸಮಾಜ ಕಟ್ಟಲು ಸಾಧ್ಯವಾಗುತ್ತದೆ. ಹಾಗಾಗಿ ಮಕ್ಕಳಿಗೆ ಎಲ್ಲಾ ತಾಯಂದಿರು ವಚನಗಳನ್ನು ಕಲಿಸಬೇಕು ಎಂದು ಹೇಳಿದರು.

ಕುಶಾಲನಗರ ತಾಲೂಕು ಕದಳಿ ವೇದಿಕೆ ಅಧ್ಯಕ್ಷೆ ಹೇಮಲತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಕದಳಿ ವೇದಿಕೆಯ ಗೌರವಾಧ್ಯಕ್ಷೆ ವಿಜಯ ಪಾಲಾಕ್ಷ, ಕೋಶಾಧಿಕಾರಿ ಜಿ.ಎಸ್. ವೇದಾವತಿ, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಕೆ.ಎಸ್. ಮೂರ್ತಿ, ಪ್ರಧಾನ ಕಾರ್ಯರ್ಶಿ ಬಿ. ನಟರಾಜು, ಕಾವೇರಿ ಸ್ವಸಹಾಯ ಸಂಘದ ಪ್ರಮುಖರಾದ ನಿವೃತ್ತ ಶಿಕ್ಷಕಿ ಮೊಳ್ಳೇರಾ ಪರ್ವತಿ, ರೇಖಾ ನಟರಾಜು, ನಂದಿನಿ, ಕಾಮಾಕ್ಷಿ, ವೇದಾವತಿ, ಕಾಂತಾ, ದೇವಕಿ, ಪುಟ್ಟಲಿಂಗಮ್ಮ, ಶಿವಮ್ಮ, ಜಯಲಕ್ಷ್ಮಿ, ಸರೋಜಾ ಆರಾಧ್ಯ, ಮಮತಾ ರವೀಶ್ ಇದ್ದರು.