ಬೆಳ್ತಂಗಡಿಯಿಂದ ರೋಗಿಯನ್ನು ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ವಗ್ಗ ಸಮೀಪದ ಅಂಚಿಕಟ್ಟೆಯಲ್ಲಿ ನಿಯಂತ್ರಣ ತಪ್ಪಿ ರಸ್ತೆಗೆ ಮಗುಚಿಬಿದ್ದಿದೆ(1). ವಾಹನ ಸವಾರ ಗುರುವಾಯನಕೆರೆ ನಿವಾಸಿ ಶಬೀರ್(2).  
ಜಿಲ್ಲೆ

ರೋಗಿಯನ್ನು ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಪಲ್ಟಿ, ಚಾಲಕ ಸಾವು

Avinash R

ಬಂಟ್ವಾಳ: ಬೆಳ್ತಂಗಡಿಯಿಂದ ರೋಗಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ವಗ್ಗ ಸಮೀಪದ ಅಂಚಿಕಟ್ಟೆ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಮಗುಚಿಬಿದ್ದಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಚಾಲಕ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಗುರುವಾಯನಕೆರೆ ನಿವಾಸಿ ಶಬೀರ್ ಮೃತಪಟ್ಟವರು. ಘಟನೆ ಬಳಿಕ ಚಾಲಕನ ಸಹಿತ ವಾಹನದಲ್ಲಿದ್ದ ರೋಗಿ ಹಾಗೂ ಅವರ ಜತೆಗಿದ್ದವರನ್ನು ತಕ್ಷಣವೇ ಬೇರೊಂದು ವಾಹನದಲ್ಲಿ ಮಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಚಾಲಕ ಮೃತಪಟ್ಟಿದ್ದಾರೆ. ರೋಗಿಯ ಸ್ಥಿತಿ ಏನಾಗಿದೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.