ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್‌ರ ಪುತ್ರ ಡಾ.ತ್ರಿಶೂಲ್ ಕುಮಾರ ರಿಮ್ಸ್ ಕಾಲೇಜಿಗೆ ಗೈರಾಗಿದ್ದರು, ಪ್ರಭಾರಿ ನಿರ್ದೇಶಕ ಡಾ.ಬಿ.ಎಚ್.ರಮೇಶ ಬೈಲಾ ನಿಯಮಗಳನ್ನು ಉಲ್ಲಂöಸಿ ಮಾಸಿಕ ೪೦ ಸಾವಿರ ರೂ ವೇತನವನ್ನು ಕಳೆದ ಒಂದು ವರ್ಷದಿಂದ ಪಾವತಿ ಮಾಡುತ್ತಿದ್ದಾರೆಂದು ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ರಾಜುಪಟ್ಟಿ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರಿ ಖೋಟಾದಲ್ಲಿ ವೈದ್ಯಕೀಯ ಕೋರ್ಸ್ ಪೂರ್ಣಗೊಳಿಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಸೇವೆ ಸಲ್ಲಿಸಲು ಸರ್ಕಾರ ನಿಯಮ ರೂಪಿಸಿದೆ.
ಆದರೆ ಗ್ರಾಮೀಣ ಶಾಸಕ ದದ್ದಲ್ ಬಸನಗೌಡರ ಪುತ್ರ ಡಾ.ತ್ರಿಶೂಲ್ ಕುಮಾರ ನಾಯಕ ಅವರು ಜ್ಯೂನಿಯರ್ ರೆಸಿಡೆನ್ಟ್ ಟ್ರೆÊನಿಯಾಗಿ ೨೦೨೪ ಜನವರಿ ೬ ರಂದು ನೇಮಿಸಲಾಗಿದೆ. ಸರ್ಕಾರಿ ಕೋಟಾದಡಿ ಟ್ಯೂಟರ್ ಹುದ್ದೆಗೆ ನೇಮಿಸಲಾಗಿದೆ.
ಇವರು ಜನವರಿ ೨೦ ರಂದು ಸೇವೆಗೆ ಹಾಜರಾಗಿ ವರದಿ ಮಾಡಿಕೊಂಡು ಮೇಲಾಽಕಾರಿಗಳ ಪೂರ್ವಾನುಮತಿ ಪಡೆಯದೇ ಯುಪಿಎಸ್‌ಸಿ ತರಬೇತಿಯಲ್ಲಿದ್ದು ಸೇವೆಗೆ ನಿರಂತರ ಗೈರಾಗಿದ್ದಾರೆ. ಆದರೆ ರಿಮ್ಸ್ ನಿರ್ದೇಶಕರು ಗೈರಾಗಿರುವ ಡಾ.ತ್ರಿಶೂಲ್‌ಕುಮಾರನಾಯಕ ಇವರಿಗೆ ಮಾಸಿಕ ೪೦ ಸಾವಿರ ರೂ ಒಂದು ವರ್ಷದಿಂದ ಪಾವತಿ ಮಾಡುತ್ತಲೇ ಬಂದಿದ್ದಾರೆ.
ಜ್ಯೂನಿಯರ್ ಟ್ರೆÊನಿ ಬದಲಾಗಿ ಟ್ಯೂಟರ್ ಎಂದು ನಿಯಮಬಾಹಿರವಾಗಿ ನೇಮಿಸಿಕೊಂಡಿದ್ದು ರಾಜಕೀಯ ಪ್ರಭಾವಕ್ಕೆ ಒಳಗಾಗಿ ಸ್ವಾಯತತ್ತೆ ಸಂಸ್ಥೆ ಬೈಲಾ ನಿಯಮಗಳನ್ನು ಉಲ್ಲಂöಸಿದ್ದಾರೆAದು ಆರೋಪಿಸಿದರು.
ಸರ್ಕಾರ ಸೇವೆ ಕಡ್ಡಾಯವಾಗಿದ್ದರೂ ಗೈರಾಗಿರುವ ಡಾ.ತ್ರಿಶೂಲ್‌ಕುಮಾರ ಇವರಿಗೆ ಯುಪಿಎಸ್‌ಸಿ ಓದಲು ಅನಽಕೃತವಾಗಿ ಅವಕಾಶ ನೀಡಿ ನಿಯಮಗಳನ್ನು ಉಲ್ಲಂöಸಲಾಗಿದೆ.
ವೈಧ್ಯಕೀಯ ಶಿಕ್ಷಣ ಸಚಿವರು ಹಾಗೂ ಇಲಾಖೆಗೆ ಕಾರ್ಯದರ್ಶಿಗಳಿಗೆ ಲಿಖಿತ ದೂರು ನೀಡಿದರೂ ತನಿಖಾ ತಂಡ ರಚಿಸಿ ಮೂರು ತಿಂಗಳಾದರೂ ತನಿಖೆಗೆ ಪ್ರಾರಂಭವಾಗಿಲ್ಲ. ಕೂಡಲೇ ಸಮಗ್ರ ತನಿಖೆ ನಡೆಯಬೇಕು. ಅಕ್ರಮ ನೇಮಕಾತಿ, ಹಾಜರಾತಿ ನೀಡಿ ಸ್ಥಳೀಯ ನಿರುದ್ಯೋಗಿಗಳಿಗೆ ವಂಚಿಸುವವರ ವಿರುದ್ದ ಕಾನೂನ ಕ್ರಮವಾಗಬೇಕೆಂದರು.
ಈ ಸಂದರ್ಭದಲ್ಲಿ ನರಸಿಂಹಲು ನೆಲಹಾಳ, ಚಂದ್ರಶೇಖರ ವಕೀಲ, ಮಹೇಶ ಕುಮಾರ, ಪ್ರಸಾದ, ಭಾಸ್ಕರ ಪ್ರಸಾದ, ಪರಶುರಾಮ್, ಶ್ರೀನಿವಾಸ ಕೊಪ್ಪರ ಇದ್ದರು.