ಹಿರೇಬಾಗೇವಾಡಿ ಪೊಲೀಸರ ವಶದಲ್ಲಿರುವ ಕೈದಿ ಅಬ್ದುಲ್ ಗನಿ. 
ಜಿಲ್ಲೆ

ಪರಾರಿಯಾಗಿದ್ದ ವಿಚಾರಣಾಧೀನ ಕೈದಿ ವಶ

ಶಂಕರ ಗೆಜ್ಜಿ

ಬೆಳಗಾವಿ: ನಗರದ ಜಿಲ್ಲಾ ನ್ಯಾಯಾಲಯದ ಆವರಣದಿಂದ ಗುರುವಾರ ಪರಾರಿಯಾಗಿದ್ದ ವಿಚಾರಣಾಧೀನ ಕೈದಿಯನ್ನು ಹಿರೇಬಾಗೇವಾಡಿ ಠಾಣೆ ಪೊಲೀಸರು ಹಿಡಿದಿದ್ದಾರೆ.

ನಗರದ ಅಬ್ದುಲ್ ಗಣಿ ತಪ್ಪಿಸಿಕೊಂಡಿದ್ದ ವಿಚಾರಣಾಧೀನ ಕೈದಿ. ಆರೋಪಿ ಮೇಲೆ ಎಪಿಎಂಸಿ, ಬೆಳಗಾವಿ ಗ್ರಾಮೀಣ, ಉದ್ಯಮಬಾಗ ಹಾಗೂ ಟಿಳಕವಾಡಿ ಠಾಣೆಯಲ್ಲಿ ಪ್ರತ್ಯೇಕವಾಗಿ ಮನೆಗಳ್ಳತನದ ಐದು ಪ್ರಕರಣಗಳಿದ್ದು, ನ್ಯಾಯಾಂಗ ವಿಚಾರಣೆ ಮುಂದುವರಿದಿದೆ.

ಹಿಂಡಲಗಾ ಕಾರಾಗೃಹದಲ್ಲಿದ್ದ ಆರೋಪಿ ಅಬ್ದುಲ್ ಗಣಿಯನ್ನು ಬೆಳಗಾವಿ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ವಿಚಾರಣೆಗೆಂದು ಟಿಳಕವಾಡಿ ಪೊಲೀಸರು ಕರೆ ತಂದಿದ್ದರು. ಪೊಲೀಸರ ಸರ್ಪಗಾವಲು ಇಲ್ಲದೆ ಇರುವುದರಿಂದ ಆರೋಪಿ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಹಿರೇಬಾಗೆವಾಡಿಯ ಮೋಮಿನ ಗಲ್ಲಿಯಲ್ಲಿ ಪೊಲೀಸರು ಇತನನ್ನು ಬಂಧಿಸಿದ್ದಾರೆ.