ಜಿಲ್ಲೆ

ಮಾಜಿ ಕ್ರೀಡಾ ಸಚಿವರಿಂದ ಸೈಕಲ್ ಸವಾರಿ

ಮೂಡುಬಿದಿರೆ: ಮಾಜಿ ಕ್ರೀಡಾ ಸಚಿವ ಕೆ. ಅಭಯಚಂದ್ರ ಜೈನ್ ಅವರು ಬುಧವಾರ ಹೊಸ ಸೈಕಲ್ ಖರೀದಿಸಿದ್ದು, ಗುರುವಾರ 15 ರಿಂದ 20 ಕಿ.ಮೀ.ನಷ್ಟು ಸೈಕಲ್ ಸವಾರಿ ಮಾಡಿದ್ದಾರೆ. ಪ್ರತಿದಿನ ಇದನ್ನು ರೂಢಿ ಮಾಡಿಕೊಳ್ಳುವ ಚಿಂತನೆಯಲ್ಲೂ ಇದ್ದಾರೆ.

ಸಣ್ಣ ವಯಸ್ಸಿನಿಂದಲೂ ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವ ಜೈನ್ ಅವರು ಈಗ 71ರ ಹರೆಯದಲ್ಲೂ ಬಾಸ್ಕೆಟ್‌ಬಾಲ್, ಶಟಲ್ ಬ್ಯಾಡ್ಮಿಂಟನ್, ಕಬಡ್ಡಿ ಮುಂತಾದ ಕ್ರೀಡೆಗಳನ್ನು ಪ್ರತಿದಿನ ಆಡುತ್ತಿದ್ದಾರೆ.

ಚಾಲಕ ಬರುವುದಕ್ಕಿಂತ ಮೊದಲು ಕಾರು ಮತ್ತು ಬಸ್ ಡ್ರೈವಿಂಗನ್ನು ತಾನೇ ಮಾಡಿಕೊಂಡು ಹೋಗುವ ಮೂಲಕ ಅವರು ಗಮನ ಸೆಳೆದಿದ್ದರು.

ಸಚಿವರಾಗಿದ್ದ ಸಂದರ್ಭ ಬೆಂಗಳೂರಿನಿಂದ ಮೂಡುಬಿದಿರೆವರೆಗೆ ಬಸ್ಸಿನಲ್ಲಿ ಬಂದು ನಂತರ ಮನೆಗೆ ಹೋಗಲು ಮೂಡುಬಿದಿರೆಯಿಂದ ಆಟೋ ಬಳಸುವ ಮೂಲಕ ಗಮನಸೆಳೆದಿದ್ದರು. ಯುವಕರು ಸೈಕಲ್ ಸವಾರಿ ಮಾಡಿದರೆ ತಮ್ಮ ಆರೋಗ್ಯದ ಜತೆಗೆ ಫಿಟ್‌ನೆಸನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ ಎಂಬುದು ಜೈನ್ ಅಭಿಮತ.