ಮಂಡ್ಯ: ಕುವೆಂಪು ಅವರಿಂದ ಪ್ರಭಾವಕ್ಕೆ ಒಳಗಾಗಿರುವ ಪ್ರೊ.ಹಿ.ಶಿ.ರಾಮಚಂದ್ರೇಗೌಡ ಅವರದು ಜಾನಪದ ಆವಿಷ್ಕಾರಕ್ಕೆ ತುಡಿಯುವ ಚಲನಶೀಲ ಮನಸು ಎಂದು ಜಾನಪದ ವಿದ್ವಾಂಸ ಚಕ್ಕೆರೆ ಶಿವಶಂಕರ್ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ಸಂದ ಕೆ.ವಿ.ಶಂಕರಗೌಡ ಶತವಾನೋತ್ಸವ ಭವನದಲ್ಲಿ ಹಿಶಿರಾ ಮತ್ತು ವನಂಶಿ ಆಪ್ತ ಬಳಗ, ಜಿಲ್ಲಾ ಜಾನಪದ ಕಲಾವಿದರ ಬಳಗದಿಂದ ಆಯೋಜಿಸಿದ್ದ ಸವಾರಂಭದಲ್ಲಿ ಅಭಿನಂದನಾ ನುಡಿಗಳನ್ನಾಡಿದರು.
ಪ್ರೊ.ಹಿಶಿರಾ ಅವರದು ಬಹುಮುಖಿ ಆಯಾಮದ ವ್ಯಕ್ತಿತ್ವ. ವಿದ್ವತ್ ವಲಯದಲ್ಲಿ ಬೇರೆ ರೀತಿ ಅವರ ಪ್ರತಿಭೆಯನ್ನು ಅನಾವರಣ ವಾಡಿದ್ದಾರೆ. ಇವರನ್ನು ಇಂದಿಗೂ ವಿದ್ವಾಂಸರು ಸಲಿಗೆಯಿಂದ, ಪರಿಚಿತ ಭಾವನೆಯಿಂದ ವಾತನಾಡಿಸಲು ಹಿಂಜರಿಯುತ್ತಾರೆ. ಆದರೆ ಇವರ ವಿಶೇಷ ವ್ಯಕ್ತಿತ್ವ ಎಂದರೆ ಇವರಲ್ಲಿರುವ ಅವ್ವನ ಅಂತಃಕರಣ. ಅವರ ಅಂತಃಕರಣ ತುಂಬ ಭಾವನಾತ್ಮಕವಾದುದು. ಇವರಲ್ಲಿ ಗ್ರಾಮೀಣ ಜೀವನದ ಒಗಚು, ನಗರೀಕರಣದ ಸಿಟ್ಟು ಎರಡೂ ಮನೆವಾಡಿದೆ. ಇವರ ಬರಹ ಮತ್ತು ವಾತು ಎರಡರಲ್ಲೂ ಪ್ರತಿಭಟನಾ ಮನೋಭಾವ ಇದೆ. ಸಿದ್ಧಾಂತಗಳ ಜತೆ ರಾಜಿ ವಾಡಿಕೊಳ್ಳದ ಮನೋಭಾವ ಇದೆ. ಕೃತಿಗಳಲ್ಲಿ ಜನನಾಯಕತ್ವದ ಕನಸು ಇದ್ದರೂ, ವರ್ತವಾನದ ಬದುಕಿನಲ್ಲಿ ಸಾಕಾರಗೊಂಡಿಲ್ಲ ಎಂದು ಅವರ ವ್ಯಕ್ತಿತ್ವವನ್ನು ವಿಶ್ಲೇಷಿಸಿದರು.
ಅಭಿನಂದನೆ ಸ್ವೀಕರಿಸಿ ವಾತನಾಡಿದ ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಪ್ರೊ.ಹಿ.ಶಿ.ರಾಮಚಂದ್ರೇಗೌಡ, ನಾವು ನಮ್ಮ ಮೂಲ ಸಂಸ್ಕೃತಿಯನ್ನು ಎತ್ತಿಹಿಡಿಯಬೇಕು. ಅಂಥ ಮೂಲದ ಸಂಸ್ಕೃತಿಯನ್ನು ಹೊಂದಿದವರು ಮಂಡ್ಯದ ಜನರು ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಜಿ.ಟಿ.ವೀರಪ್ಪ ಸವಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಿ.ಪಿ.ಸ್ವಾಮಿ, ಕೀಲಾರ ಕೃಷ್ಣೇಗೌಡ, ಕಾರಸವಾಡಿ ಮಹದೇವು, ದೇವರಾಜ್ ಕೊಪ್ಪ ಇತರರಿದ್ದರು.
ಪ್ರೊ.ಹಿ.ಶಿ.ರಾಮಚಂದ್ರೇಗೌಡ ಹಾಗೂ ಡಾ.ಜೀಶಂಪ ಜಾನಪದ ತಜ್ಞ ಪ್ರಶಸ್ತಿ ಪುರಸ್ಕೃತ ವ.ನಂ. ಶಿವರಾಮು ಅವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಜಾನಪದ ಗೀತಗಾಯನ ಕಾರ್ಯಕ್ರಮ ನಡೆಯಿತು.