ಜಿಲ್ಲೆ

ಅಭಿಮತ ಟಿವಿ ಪಂಚಮ ಸಂಭ್ರಮ- ಸೆ. 3ರಂದು ಕೇಂದ್ರ ಕಚೇರಿ ಉದ್ಘಾಟನೆ

Mangaluru - Prakash MC Manjeshwar

ಮಂಗಳೂರು: ಮುಂಬೈ ಹೇರಂಬ ಇಂಡಸ್ಟ್ರೀಸ್ ಸಂಸ್ಥೆಯ ಚೇರ್ಮನ್ ಕನ್ಯಾನ ಸದಾಶಿವ  ಶೆಟ್ಟಿ ಅವರ ಮುಂದಾಳತ್ವದಲ್ಲಿ ಡಾ.ಮಮತಾ ಪಿ. ಶೆಟ್ಟಿ ಅವರ ಸಾರಥ್ಯದಲ್ಲಿ ಅಭಿಮತ ಟಿವಿಯ ಪಂಚಮ ಸಂಭ್ರಮ ಮತ್ತು ಕೇಂದ್ರ ಕಚೇರಿಯ ಉದ್ಘಾಟನಾ ಸಮಾರಂಭ ಸೆಪ್ಟಂಬರ್ 3 ರಂದು ಬೆಳಗ್ಗೆ 9.30ಕ್ಕೆ ಯೆಯ್ಯಡಿ ಕೆಪಿಟಿ ಬಳಿಯ  ಶರಬತ್ ಕಟ್ಟೆ ಶ್ರೀ ನಿಧಿ ಟವರ್‌ನಲ್ಲಿ ನಡೆಯಲಿದೆ.ಮಧ್ಯಾಹ್ನ 11ಕ್ಕೆ ಉದ್ಘಾಟನೆ ನೆರವೇರಲಿದೆ. ವಿಧಾನ ಸಭಾಧ್ಯಕ್ಷ ಯು.ಟಿ ಖಾದರ್, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಶಾಸಕರಾದ ವೇದವ್ಯಾಸ ಕಾಮತ್, ರಾಜೇಶ್ ನಾಯ್ಕ್, ಉಮಾನಾಥ ಕೋಟ್ಯಾನ್, ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಮಾಜಿ ಸಚಿವ ಬಿ.ರಮಾನಾಥ ರೈ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಬಂಟರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ ಶೆಟ್ಟಿ ಮೊದಲಾದವರು ಭಾಗವಹಿಸಲಿದ್ದಾರೆ.ಅಕ್ಟೋಬರ್ 1ರಿಂದ ಅಭಿಮತ ಟಿವಿ ಪೂರ್ಣ ಪ್ರಮಾಣದಲ್ಲಿ ಕರಾವಳಿ ಜಿಲ್ಲೆಯಲ್ಲಿ ಪ್ರಸಾರಗೊಳ್ಳಲಿದೆ. ವಿಭಿನ್ನ ಕಾರ್ಯಕ್ರಮ, ಹೊಸ ಚಿಂತನೆ, ವಿಭಿನ್ನ ಕಾರ್ಯಕ್ರಮಗಳೊಂದಿಗೆ ಆಭಿಮತ ಟಿವಿ, ಸಾಹಿತ್ಯ, ಸಾಂಸ್ಕೃತಿಕ, ಕ್ರೀಡೆ, ಧಾರ್ಮಿಕ, ಜನಪದ,  ರಾಜಕೀಯ ಹಾಗೂ ಇನ್ನಿತರ ಅನೇಕ ವೈವಿಧ್ಯ ಕಾರ್ಯಕ್ರಮಗಳೊಂದಿಗೆ ನಾಡಿನ ಜನರ ಮುಂದೆ ಬರಲಿದೆ ಎಂದು ಪ್ರಕಟಣೆ ತಿಳಿಸಿದೆ.