ಭಾರತೀಯ ಜೇಸಿಸ್‌ನ ವಲಯ 15ರ ವಲಯಾಧ್ಯಕ್ಷರಾಗಿ ಆಯ್ಕೆಯಾದ ಅಭಿಲಾಶ್ ಅವರನ್ನು ಸನ್ಮಾನಿಸಲಾಯಿತು. ಪ್ರಕಾಶ್ ಮಂಡ್ಯ, ಹುಸೇನ್ ಹೈಕಾಡಿ ಮೊಲದಾದವರಿದ್ದರು.  
ಜಿಲ್ಲೆ

ಅಭಿಲಾಶ್‌ರಿಗೆ ಕುಂದಾಪುರ ಜೆಸಿಐನಿಂದ ಸನ್ಮಾನ

ಇಂದಿರಾ ಎನ್ ಕೆ

ಕುಂದಾಪುರ: ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಕುಂದಾಪುರ ಲೇಜಿನ್ ಆತಿಥ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ 2025ರ ಸಾಲಿನ ಭಾರತೀಯ ಜೇಸಿಸ್‌ನ ವಲಯ 15ರ ವಲಯಾಧ್ಯಕ್ಷರಾಗಿ ಆಯ್ಕೆಯಾದ ಜೆಸಿಐ ಕುಂದಾಪುರ ಸಿಟಿ ಸಂಸ್ಥೆಯ ಮಾಜಿ ಅಧ್ಯಕ್ಷ ಅಭಿಲಾಶ್ ಬಿ. ಎ. ಅವರನ್ನು ಜೆಸಿಐ ಕುಂದಾಪುರ ಸಿಟಿ ವತಿಯಿಂದ ಸನ್ಮಾನಿಸಲಾಯಿತು. ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಕುಂದಾಪುರ ಲೇಜಿನ್ ಅಧ್ಯಕ್ಷ ಪ್ರಕಾಶ್ ಮಂಡ್ಯ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಉಪಾಧ್ಯಕ್ಷ ಹುಸೇನ್ ಹೈಕಾಡಿ, ಜೆಸಿಐ ಪ್ರಮುಖರಾದ ಗೋಪಾಲ ಪೂಜಾರಿ, ಶಿವಾನಂದ, ರಮೇಶ್ ದೇವಾಡಿಗ, ವಿಷ್ಣು ಕೆ. ಬಿ, ಚಂದ್ರ ಇಂಬಾಳಿ, ಶ್ರೀನಿವಾಸ್, ಯು. ರಾಧಾಕೃಷ್ಣ, ನವೀನ್ ಶೇಟ್, ಅಜಿತ್ ಕೋಟ, ನಾಗೇಶ್ ನಾವಡ, ರಾಘವೇಂದ್ರ ಚರಣ್ ನಾವಡ, ವಿಜಯ ಭಂಡಾರಿ, ದಿನೇಶ್ ಗೋಡೆ, ರತ್ನಾಕರ್, ಗಂಗಾಧರ್, ಪ್ರಭಾಕರ್ ಎಸ್. ಉಪಸ್ಥಿತರಿದ್ದರು.