ಜಿಲ್ಲೆ

‘ಆಭರಣಗಳು’ ಕೃತಿ ಅನಾವರಣ

Mangaluru - Hariprasad Rai


ಮಂಗಳೂರು : ಸಾಹಿತಿಗಳಿಗೆ, ಪತ್ರಕರ್ತರಿಗೆ , ಶಿಕ್ಷಕರಿಗೆ ಸಾಮಾಜಿಕ ಜವಾಬ್ದಾರಿ ಇದೆ. ತಮ್ಮ ಜವಾಬ್ದಾರಿ ಅರಿತು ಮಾನವೀಯ ನೆಲೆಯಲ್ಲಿ ಆತ್ಮಸಾಕ್ಷಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸಿದರೆ ಮಾತ್ರ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಸಾಧ್ಯ ಎಂದು ಸಾಹಿತಿ, ನಿವೃತ್ತ ಶಿಕ್ಷಕಿ ಚಂದ್ರಕಲಾ ನಂದಾವರ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಪತ್ರಕರ್ತ ರೇಮಂಡ್ ಡಿಕುನಃ ತಾಕೊಡೆ ಅವರ ‘ಆಭರಣಗಳು’ ಕೃತಿ ಅನಾವರಣ ನೆರವೇರಿಸಿ ಮಾತನಾಡಿದ ಅವರು ‘ ರೇಮಂಡ್ ಅವರು ತಮ್ಮ ಕೃತಿಯ ಮೂಲಕ ಾಸ್ತವವನ್ನು ತೆರೆದಿಡುವ ಪ್ರಯತ್ನ ಮಾಡಿದ್ದಾರೆ. ಕೃತಿಯಲ್ಲಿ ಭಾಷೆ ನಿಂತ ನೀರಾಗದೆ ಹೊಸ ಕನ್ನಡ ಶಬ್ದಗಳ ಪರಿಚಯದೊಂದಿಗೆ ರೂಪಕವಾಗಿ ಮೂಡಿಬಂದಿದೆ ಎಂದರು.
ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕೃತಿಕಾರ ರೇಮಂಡ್ ರೇಮಂಡ್ ಡಿಕುನಃ ತಾಕೊಡೆ ಸ್ವಾಗತಿಸಿ, ರಿಯಾನ ಡಿಕುನಃ ವಂದಿಸಿದರು. ಭಾಸ್ಕರ ರೈ ಕಟ್ಟ ಕಾರ್ಯಕ್ರಮ ನಿರೂಪಿಸಿದರು.