ಯಾದಗಿರಿ: ಜಿಪಂ ಅಧ್ಯಕ್ಷ ಅವಧಿ ಸಮಯ ಕಡಿಮೆ ಇದ್ದರೂ ಪ್ರಾಮಾಣಿಕವಾಗಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಜಿಪಂ ನೂತನ ಅಧ್ಯಕ್ಷ ಬಸ್ಸನಗೌಡ ಯಾಡಿಯಾಪೂರ ಅವರಿಗೆ ಅಬ್ಬೆತುಮಕೂರು ಮಠದ ಪೀಠಾಧಿಪತಿ ಡಾ.ಗಂಗಾಧರ ಶ್ರೀ ಮತ್ತು ಹೆಡಗಿಮದ್ರಾದ ಶ್ರೀಶಾಂತ ಶಿವಯೋಗಿ ಮಠದ ಪೀಠಾಧಿಪತಿ ಶಾಂತಮಲ್ಲಿಕಾರ್ಜುನ ಪಂಡಿತಾರಾಧ್ಯ ಶ್ರೀಗಳು ಸಲಹೆ ನೀಡಿದರು.
ಸೋಮವಾರ ಜಿಪಂ ನೂತನ ಅಧ್ಯಕ್ಷರು ಉಭಯ ಮಠಗಳಿಗೆ ಭೇಟಿ ನೀಡಿ ಶ್ರೀಗಳ ದರ್ಶನಾಶೀರ್ವಾದ ಪಡೆದ ವೇಳೆ ಪ್ರಸಕ್ತ ದಿನಗಳಲ್ಲಿ ಕರೋನಾ ವೈರಸ್ ದಾಳಿಯಿಂದ ಜನರು ಸಂಕಷ್ಟ ಎದುರಿಸುತ್ತಾರೆ. ಮೊದಲು ನಿಯಂತ್ರಣಕ್ಕೆ ಸರ್ಕಾರ ಯತ್ನಿಸಬೇಕು. ಜತೆಗೆ ಜನರು ಕೂಡ ಜಾಗ್ರತರಾಗಿ ಅಗತ್ಯ ಮುನ್ನೆಚ್ಚರಿಗೆ ಕ್ರಮ ಅನುಸರಿಸುವ ಮೂಲಕ ವೈರಸ್ನಿಂದ ದೂರವಿರಿ ಎಂದು ಕರೆ ನೀಡಿದರು.
ಶ್ರಾವಣ ಮಾಸ ಎಲ್ಲರಿಗೂ ಪವಿತ್ರ ದಿನಗಳು ಈ ಸಂದರ್ಭದಲ್ಲಿ ಜನರು ಭಕ್ತಿಯಿಂದ ಧಾರ್ಮಿಕ ಕ್ಷೇತ್ರಗಳ ದರ್ಶನ ಪಡೆದರೆ, ಅವರ ಬದುಕು ಪಾವನವಾಗಿ ಬದಲಾವಣೆಗೆ ಪ್ರೇರಣೆ ಸಿಗುತ್ತದೆ. ಆದರೆ ಪ್ರಸಕ್ತ ಸಾಲಿನಲ್ಲಿ ಕೋವಿಡ್-19 ಸಮಸ್ಯೆ ಇರುವುದರಿಂದ ಜನತೆ ಮನೆಯಲ್ಲಿದ್ದುಕೊಂಡೆ ಭಗವಂತನ ನಾಮಸ್ಮರಣೆ ಮಾಡುವಂತೆ ನುಡಿದರು.
ಭೀಮರಡ್ಡಿ ಪಾಟೀಲ್ ಕುರಾಳ, ಮಲ್ಲಾರಡ್ಡಿ ಮಲ್ಲಾಬಾದಿ, ಎಮ್.ಎಸ್. ಪಾಟೀಲ್, ರಾಜಶೇಖರ ಪುಲಮಾಮಡಿ, ಮಲ್ಲಾರಡ್ಡಿ ಹೋತಪೇಟ್, ಮರೆಪ್ಪ ಹಯ್ಯಾಳಕರ್, ಸಂಗಾರಡ್ಡಿ ನಾಲವಾರ್, ರಾಜುಗೌಡ ಮಾರಡಗಿ, ರಮೇಶ ದೊಡ್ಮನಿ, ಲಿಂಗಾರಡ್ಡಿ ಗಡ್ಡೆಸೂಗುರ್, ವಿರುಪಾಕ್ಷಯ ಸ್ವಾಮೀ ಸೇರಿ ಇತರರಿದ್ದರು