filter: 0; fileterIntensity: 0.0; filterMask: 0; captureOrientation: 0; module: video; hw-remosaic: false; touch: (-1.0, -1.0); modeInfo: Beauty ; sceneMode: 0; cct_value: 4663; AI_Scene: (-1, -1); aec_lux: 301.0; aec_lux_index: 0; hist255: 0.0; hist252~255: 0.0; hist0~15: 0.0; albedo: ; confidence: ; motionLevel: 0; weatherinfo: null; temperature: 40; 
ಜಿಲ್ಲೆ

ಮೃತ ಚೇತನ ಕುಟುಂಬಕ್ಕೆ ಧೈರ್ಯ ತುಂಬಿದ ಅಬ್ಬಯ್ಯ

ಹುಬ್ಬಳ್ಳಿ: ಚಾಕು ಇರಿತದಿಂದ ಮೃತಪಟ್ಟ ಇಲ್ಲಿಯ ಗುರುಸಿದ್ದೇಶ್ವರ ನಗರದ ಚೇತನ ರಕ್ಕಸಗಿ ಮನೆಗೆ ಶಾಸಕ ಪ್ರಸಾದ ಅಬ್ಬಯ್ಯ ಶನಿವಾರ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು. ವೈಯಕ್ತಿವಾಗಿ 50 ಸಾವಿರ ರೂ. ಆರ್ಥಿಕ ಸಹಾಯ ಮಾಡಿದರು.

ಇರುವ ಒಬ್ಬ ಮಗನನ್ನು ಕಳೆದುಕೊಂಡಿದ್ದೇವೆ. ಎರಡನೇ ಮಗಳ ಮದುವೆ ತಯಾರಿಯಲ್ಲಿದ್ದ ನಮಗೆ ಮಗನ ಸಾವು ಬರಸಿಡಿಲು ಬಡಿದಂತಾಗಿದೆ ಎಂದು ಪಾಲಕರು, ಅಬ್ಬಯ್ಯ ಅವರ ಮುಂದೆ ದುಃಖ ತೋಡಿಕೊಂಡರು.

ಸಂತೈಸಿದ ಶಾಸಕರು, ಮನೆಗೆ ಆಸರೆಯಾಗಿದ್ದ ಮಗನ ಮೃತಪಟ್ಟಿದ್ದು ಅನ್ಯಾಯ. ಅದರಲ್ಲೂ ಕೊಲೆಯಂಥ ದುರ್ಘಟನೆ ಸಹಿಸಲು ಸಾಧ್ಯವೇ ಇಲ್ಲ. ಇನ್ನುಳಿದ ಹೆಣ್ಣುಮಕ್ಕಳ ಭವಿಷ್ಯ ರೂಪಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ಧೈರ್ಯ ತಂದುಕೊಳ್ಳಿ. ಸರ್ಕಾರದಿಂದ ಸಹಾಯಧನ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.

ಮುಖಂಡರಾದ ಗುರುನಾಥ ಉಳ್ಳಿಕಾಶಿ, ಮೋಹನ ಅಸುಂಡಿ, ಕುಮಾರ ಕುಂದನಹಳ್ಳಿ, ಮಂಜುನಾಥ ಕಠಾರೆ, ಅರ್ಜುನ ಪಾಟೀಲ, ಯುಲ್ಲಪ್ಪ ಮೆಹರವಾಡೆ, ಮುಸ್ತಾಕ ಮುದಗಲ್, ಪ್ರೇಮನಾಥ ಚಿಕ್ಕತುಂಬಳ, ನಾಸಿರ್ ಅಸುಂಡಿ, ಅಕ್ಬರ್ ಅಂಗಡಿ, ಸಂತೋಷ ಪೂಜಾರಿ, ರಿಹಾನ್ ಐನಾಪುರಿ ಅನೇಕರಿದ್ದರು.