ಜಿಲ್ಲೆ

ನೀರಾವರಿ ಪ್ರದೇಶ ಕೈಬಿಟ್ಟು ಕೈಗಾರಿಕೆ ಸ್ಥಾಪಿಸಿ

ಎನ್.ವೆಂಕಟೇಶ್

ಶಿಡ್ಲಘಟ್ಟ: ತಾಲೂಕಿನ ಜಂಗಮಕೋಟೆ ಹೋಬಳಿಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವಂತೆ ಒತ್ತಾಯಿಸಿ ಕೆಐಎಡಿಬಿ ರೈತಪರ ಹೋರಾಟ ಸಮಿತಿ ವತಿಯಿಂದ ನಗರದ ತಾಲೂಕು ಕಚೇರಿ ಎದುರು ಸೋಮವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಹೋರಾಟ ಸಮಿತಿ ನೇತೃತ್ವದಲ್ಲಿ ನಗರದ ಬಸ್​ ನಿಲ್ದಾಣದ ಬಳಿಯ ಇಂದಿರಾ ಕ್ಯಾಂಟಿನ್​ ಎದುರಿನಿಂದ ತಾಲೂಕು ಕಚೇರಿಯವರೆಗೆ ಪ್ರತಿಭಟನಾ ಸೋಮವಾರ ಮೆರವಣಿಗೆ ಪ್ರತಿಭಟನಾಕಾರರು ಮೆರವಣಿಗೆ ನಡೆಸಿದರು.

ಸರ್ಕಾರ ಅಧಿಸೂಚನೆ ಹೊರಡಿಸಿರುವ 2823 ಎಕರೆಯಲ್ಲಿ ಸರ್ಕಾರಿ ಜಮೀನು ಹೊರತುಪಡಿಸಿ, ಉಳಿದ ಗ್ರಾಮಗಳಿಗೆ ಹೊಂದಿಕೊಂಡಿರುವ ನೀರಾವರಿ ಪ್ರದೇಶವನ್ನು ಕೈಬಿಡಬೇಕು. ಕೈಗಾರಿಕೆಗಳನ್ನು ಪ್ರಾರಂಭ ಮಾಡಲು ಸರ್ಕಾರ ತ್ವರಿತಗತಿಯಲ್ಲಿ ಪ್ರಕ್ರಿಯೆ ಆರಂಭಿಸುವಂತೆ ಒತ್ತಾಯಿಸಿದರು. ಚುರುಕುಗತಿಯಲ್ಲಿ ಭೂಸ್ವಾಧಿನ ಪಡಿಸಿಕೊಂಡು ಭೂಮಿ ನೀಡಿದ ರೈತರಿಗೆ ಉತ್ತಮ ಪರಿಹಾರ, ಮನೆಗೊಂದು ಶಾಶ್ವತ ಕೆಲಸ ನೀಡಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಜಂಗಮಕೋಟೆ ಹೋಬಳಿಯಲ್ಲಿ 520 ಎಕರೆ ಸಂಪೂರ್ಣವಾಗಿ ಪಿಎಸ್​ಎಲ್​ ಕಂಪನಿ ಹೆಸರಿನಲ್ಲಿದೆ. ಆ ಜಮೀನುಗಳ ಮೂಲ ರೈತರಿಗೆ ಸರ್ಕಾರದ ಭೂ ಪರಿಹಾರದ ಹಣ ಜಮಾ ಆಗಬೇಕು. ಪಿಎಸ್​ಎಲ್​ ಕಂಪನಿಯಿಂದ ಮೋಸ ಹೊಗಿರುವ ರೈತರಿಗೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಯುತ್ತದೆ. ನಮ್ಮ ಹೋರಾಟ ಕೆಐಎಡಿಬಿ ಪರ ಅಲ್ಲ, ಅಭಿವೃದ್ಧಿ ಪರವಾಗಿ ಮಾತ್ರ ಎಂದರು.

ಅಪರ ಜಿಲ್ಲಾಧಿಕಾರಿ ಎನ್​.ಭಾಸ್ಕರ್​ ಅವರಿಗೆ ಪ್ರತಿಭಟನಾಕಾರರು ಮನವಿ ಪತ್ರ ಸಲ್ಲಿಸಿದರು. ಉಪವಿಭಾಗಾಧಿಕಾರಿ ಅಶ್ವಿನ್​, ಡಿವೈಎಸ್​ಪಿ ಮುರಳೀಧರ್​ ಮತ್ತು ತಹಸೀಲ್ದಾರ್​ ಗಗನಸಿಂಧು ಹಾಜರಿದ್ದರು.

ಹೋರಾಟ ಸಮಿತಿಯ ನಡುಪಿನಾಯಕನಹಳ್ಳಿ ಸುಬ್ರಮಣಿ, ವಾಸುದೇವ ಮೂರ್ತಿ, ಪ್ರಮೋದ್​, ಬಸವಪಟ್ಟಣ ಆಂಜಿನಪ್ಪ, ಪ್ರಭುದೇವ್​, ತಿಪ್ಪೇಗೌಡ, ರಾಮದಾಸ್​, ನಾಗರಾಜ್​, ಯಣ್ಣಂಗೂರು ಹರೀಶ್​, ಗಂಗಾಧರ್​, ಈರಪ್ಪ, ಮಧು, ನರಸಿಂಹಮೂರ್ತಿ, ಭಕ್ತರಹಳ್ಳಿ ವಿಶ್ವನಾಥ್​, ಮುನಿಶಾಮಿ, ಜಂಗಮಕೋಟೆ ಜೆ.ಸಿ.ಮಂಜುನಾಥ್​, ಮುನಿರಾಜು, ನಾಗರಾಜ್​, ಚೀಮಂಗಲ ಚಿನ್ನಪ್ಪ, ಅತ್ತಿಗಾನಹಳ್ಳಿ ಮುನೇಗೌಡ, ನವೀನಕುಮಾರ್​, ಮುನಿಕೆಂಚಪ್ಪ, ಹೀರೆಪಾಳ್ಯ ಕದೀರೇಗೌಡ, ಬೀಮಣ್ಣ, ನಾಗವೇಣಿ, ಗಾಯತ್ರಿ, ಶ್ಯಾಮ್​, ರಾಜೇಶ್​, ವಾರಹುಣಸೇನಹಳ್ಳಿ ನರಸಿಂಹ ಮೂರ್ತಿ, ಕರ್ನಾಟಕ ಕಸ್ತೂರಿ ಜನಪರ ವೇದಿಕೆ ಜಿಲ್ಲಾಧ್ಯಕ್ಷ ರಾಮಾಂಜಿನಪ್ಪ, ಪ್ರಕಾಶ, ಮಾನವ ಹಕ್ಕುಗಳ ಸಂಟನೆಯ ಮಳ್ಳೂರು ಅಶೋಕ್​, ದಲಿತ ಸಂರ್ಷ ಸಮಿತಿಯ ಸಂಚಾಲಕ ಚಲಪತಿ, ಕೃಷ್ಣಪ್ಪ ಹಾಜರಿದ್ದರು.

ಎಕರೆಗೆ 3 ಕೋಟಿ ಪರಿಹಾರ: ಕೈಗಾರಿಕೆಗೆ ಭೂಮಿ ನೀಡಿದ ರೈತನ ಪ್ರತಿ ಎಕರೆಗೆ 3 ಕೋಟಿ ರೂ. ಪರಿಹಾರ ನೀಡಲು ಕ್ರಮ ವಹಿಸಬೇಕು. ತಾಲೂಕಿನ ಜಂಗಮಕೋಟೆ ಹೋಬಳಿಯಲ್ಲಿ ಜಂಗಮಕೋಟೆ ಹೋಬಳಿಯಲ್ಲಿ ಪಿಎಸ್​ಎಲ್​ ಕಂಪನಿಯ ಹೆಸರಿನಲ್ಲಿ ಕೆಲ ಮಧ್ಯವರ್ತಿಗಳು ಅಮಾಯಕ ರೈತರಿಗೆ ಹೆಚ್ಚಿನ ಹಣ ನೀಡುವುದಾಗಿ ನಂಬಿಸಿ ಒಂದು ಎಕರೆಗೆ 50 ಸಾವಿರ, 1 ಲಕ್ಷ ಹಣ ನೀಡಿ ಜಿಪಿಎ ಮಾಡಿಸಿಕೊಂಡಿದ್ದಾರೆ. ಈ ಪೈಕಿ 520 ಎಕರೆ ಸಂಪೂರ್ಣವಾಗಿ ಪಿಎಸ್​ಎಲ್​ ಕಂಪನಿಯ ಹೆಸರಿನಲ್ಲಿದ್ದರೆ, 380 ಎಕರೆ ಪಹಣೆ ರೈತರ ಹೆಸರಿನಲ್ಲಿದೆ. ಎರಡೂ ಸೇರಿ ಒಟ್ಟು 900 ಎಕರೆ ಜಮೀನು ಕೆಐಎಡಿಬಿ ಭೂಸ್ವಾಧಿನಕ್ಕೆ ಒಳಪಟ್ಟಿದೆ. ಹಾಗಾಗಿ ಈ 900 ಎಕರೆ ಜಮೀನಿನ ಮಾಲೀಕರಿಗೆ ಸರ್ಕಾರದ ಭೂ ಪರಿಹಾರದ ಹಣ ನೀಡಬೇಕು. ಬಡವರಿಗೆ ನ್ಯಾಯಾಲಯಕ್ಕೆ ಹೋಗುವ ಶಕ್ತಿ ಇಲ್ಲ. ಹಾಗಾಗಿ ಸರ್ಕಾರ ರೈತರ ಪರವಾಗಿ ವಕೀಲರನ್ನು ನೇಮಿಸಿ ಕೆಲ ರೈತರ ಪಹಣಿಗಳಲ್ಲಿ ನಮೂದು ಆಗಿರುವ ತಡೆಯಾೆ ಆದೇಶ ರದ್ದುಗೊಳಿಸಲು ಕ್ರಮ ವಹಿಸಬೇಕು. ಭೂ ಪರಿಹಾರವನ್ನು ಒಂದೇ ಕಂತಿನಲ್ಲಿ ರೈತರ ಖಾತೆಗೆ ಜಮಾ ಮಾಡಬೇಕು. ಕೆಐಎಡಿಬಿ ಪರ ಇರುವ ಕೆಲ ರೈತರ ಮೇಲೆ ಹಲ್ಲೆ, ದಬ್ಬಾಳಿಕೆ ನಡೆಯುತ್ತಿದ್ದು, ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ರಾಜ್ಯ ರೈತ ಸಂ, ಹಸಿರುಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತಿಶ್​ ಒತ್ತಾಯಿಸಿದರು.