ಮಡಿಕೇರಿ:
ತಮಿಳುನಾಡಿನ ತಿರಿಚ್ಚಿಯಲ್ಲಿ ನಡೆದ ಅಬ್ಬಕಾಸ್ ವರ್ಲ್ಡ್ ರೆಕಾರ್ಡ್ 2025ರ ಸ್ಪರ್ಧೆಯಲ್ಲಿ ಮೈಸೂರಿನ ಪಿಎಂ ಶ್ರೀ ಕೇಂದ್ರಿಯ ವಿದ್ಯಾಲಯದ ವಿದ್ಯಾರ್ಥಿ 11ರ ಹರೆಯದ ಎ.ಕೆ. ಸುಪ್ರೀತ್ ಅಯ್ಯಪ್ಪ ಗೆಲುವು ಸಾಧಿಸುವ ಮೂಲಕ ಸಾಧನೆ ಮಾಡಿದ್ದಾರೆ.
ಇವರು ಕೊಡಗು ಜಿಲ್ಲೆಯ ಕಿಕ್ಕರಳ್ಳಿ ಗ್ರಾಮದ ಅಜ್ಜಮಕ್ಕಡ ಕಾರ್ಯಪ್ಪ(ಕಾಶಿ) ಮತ್ತು ಅಜ್ಜಮಕ್ಕಡ ಬೀನಾ ದಂಪತಿಯ ಪುತ್ರ. ಸುಪ್ರೀತ್‌ಗೆ ತರಬೇತುಗಾರ್ತಿ ಅಂಬಿಕಾ ತರಬೇತಿ ನೀಡಿದ್ದರು.